ದಿನದ ಸುದ್ದಿ

ದಾವಣಗೆರೆ | ಕುಸ್ತಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರಥಮ ಸ್ಥಾನ

Published

on

ಸುದ್ದಿದಿನ,ದಾವಣಗೆರೆ : ತಮಿಳುನಾಡಿನ ಕುಮಾರ್ ಪಲ್ಯಂನಲ್ಲಿ ಭಾನುವಾರ ಮುಕ್ತಾಯಗೊಂಡ ದಕ್ಷಿಣ ಭಾರತದ ಕುಸ್ತಿಯಲ್ಲಿ ದಾವಣಗೆರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕಾಶಿನಾಥ್ ಬೀಳಗಿ 63.ಕೆಜಿ ವಿಭಾಗದಲ್ಲಿ ಗ್ರಿಕೋ ರೋಮನ್‌ನಲ್ಲಿ ಪ್ರಥಮಸ್ಥಾನ ಪಡೆದಿದ್ದಾನೆ.

ವಿದ್ಯಾರ್ಥಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಆರ್ ಅಂಜಿನಪ್ಪ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ರೇಖಾ ಎಂ.ಆರ್, ಕ್ರೀಡಾ ವಿಭಾಗದ ಸದಸ್ಯರುಗಳಾದ ಪ್ರೊ. ಭೀಮಣ್ಣ ಸುಣಗಾರ, ಪ್ರೊ.ಗಿರಿಸ್ವಾಮಿ, ಡಾ.ಕೆ.ನಾರಾಯಣಸ್ವಾಮಿ, ಪ್ರೊ ಜ್ಯೋತಿ, ಡಾ.ಯಶೋಧ, ಪ್ರೊ ವೆಂಕಟೇಶ್ ಬಾಬು, ಪ್ರೊ. ಷಣ್ಮುಖ, ಪತ್ರಾಂಕಿತ ವ್ಯವಸ್ಥಾಪಕರಾದ ಗೀತಾದೇವಿ ಕಾಲೇಜಿನ ಬೋದಕ /ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಶುಭಾ ಹಾರೈಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version