ದಿನದ ಸುದ್ದಿ
ಎಲ್ಐಸಿಯ ‘ಐಪಿಓ’ ಇಂದಿನಿಂದ ಲಭ್ಯ
ಸುದ್ದಿದಿನ ಡೆಸ್ಕ್ : ಭಾರತೀಯ ಜೀವ ವಿಮಾ ನಿಗಮದ ಐಪಿಒ ಇಂದಿನಿಂದ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಕಂಪನಿಯು ಶೇಕಡ 3.5ರಷ್ಟು ಷೇರು ಮಾರಾಟ ಮಾಡುವ ಮೂಲಕ 21 ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವ ಉದ್ದೇಶವನ್ನು ಸರ್ಕಾರ ಹಾಕಿಕೊಂಡಿದೆ. ಎಲ್‌ಐಸಿ, ಷೇರುಪೇಟೆ ಪ್ರವೇಶ ಮಾಡಿದ ಬಳಿಕ ಅದರ ಮಾರುಕಟ್ಟೆ ಮೌಲ್ಯ ಅಂದಾಜು 6 ಲಕ್ಷ ಕೋಟಿ ರೂಪಾಯಿ ಆಗಬಹುದು ಎಂಬ ನಿರೀಕ್ಷೆ ಇದೆ.
ಚಿಲ್ಲರೆ ಹೂಡಿಕೆದಾರರು ಮತ್ತು ಸಂಸ್ಥೆಯ ಸಿಬ್ಬಂದಿಗೆ ಪ್ರತಿ ಷೇರಿಗೆ ತಲಾ 45 ರೂಪಾಯಿ ಮತ್ತು ವಿಮಾ ಪಾಲಿಸಿ ಹೊಂದಿರುವವರಿಗೆ ಪ್ರತಿ ಷೇರಿಗೆ 60 ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ. ಪ್ರತಿ ಷೇರಿಗೆ ಸರ್ಕಾರ 902 ರಿಂದ 949 ರೂಪಾಯಿ ದರ ನಿಗದಿಪಡಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243