ಲೈಫ್ ಸ್ಟೈಲ್
ಅರೆ ತಲೆನೋವು, ಮೂಲವ್ಯಾಧಿ ಗುಣಪಡಿಸುತ್ತೆ ಈ ‘ಹಿಪ್ಪಲಿ’..!
ಹಿಪ್ಪಲಿ ಕಪ್ಪಾಗಿದರು, ರುಚಿಯಲ್ಲಿ ಸ್ವಲ್ಪ ಖಾರ ಸುವಾಸನೆಯಲ್ಲಿ ಮೆಣಸಿನ ಕಾಳಿನ ವಾಸನೆಯನ್ನೇ ಹೋಲುತ್ತದೆ. ಆದರೆ ನೋಡಲು ಸ್ವಲ್ಪ ಉದ್ದವಾಗಿದ್ದು ಇದು ಕೂಡ ಬಳ್ಳಿಯಲ್ಲೇ ಬಿಡುವ ಸಂಬಾರಿನ ವಸ್ತು ಇದಾಗಿದೆ. ಈ ಹಿಪ್ಪಲಿಯ ಕಾಯಿಗಳು ಗೊಂಚಲಾಗಿ ಉರುಳೆಯಾಕಾರವಾಗಿರುತ್ತದೆ. ಇದು ಕಾಯಾಗಿರುವಾಗ ಎಲೆಹಸಿರು ಬಣ್ಣದಿಂದ ಕೂಡಿದ್ದು. ಬೆಳೆದು ಒಣಗಿದ ಮೇಲೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಹಿಪ್ಪಲಿಯ ಉಪಯೋಗ
- ಅರೆ ತಲೆನೋವು ನಿವಾರಿಸುವಲ್ಲಿ ಹಿಪ್ಪಲಿ ಪುಡಿ ಸಹಾಯಕಾರಿ.
- ಅರ್ಧ ಚಮಚ ಹಿಪ್ಪಲಿ ಪುಡಿಗೆ ಅರ್ಧ ಚಮಚ ಜೇನುತುಪ್ಪ ಕಲಸಿ ದಿನಕ್ಕೆ 3 ಬಾರಿ ಸೇವಿಸಿದರೆ ಬೊಜ್ಜು ಕರಗಲು ಸಹಾಯಕಾರಿ.
- ಹಿಪ್ಪಲಿಯನ್ನು ಗೋಮೂತ್ರದ ಜೊತೆ ಸೇವಿಸಿದರೆ ಸಂಧಿಗಳ ನೋವು-ಊತ ಕಡಿಮೆಯಾಗುವಲ್ಲಿ ಸಹಕಾರಿ.
- ಹಿಪ್ಪಲಿ , ಶುಂಠಿ , ಕರಿಮೆಣಸು ಹಾಗೂ ನಾಗಕೇಸರಗಳನ್ನು ಪುಡಿ ಸೇವಿಸುವುದರಿಂದ ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವು ಕಡಿಮೆಯಾಗುತ್ತದೆ.
- ಹಿಪ್ಪಲಿ ಪುಡಿ, ಹುರಿದ ಜೀರಿಗೆ ಪುಡಿ, ಸೇದರಲಾಣಿ ಉಪ್ಪು ಎಲ್ಲವನ್ನು ಸೇರಿಸಿ ಮಜ್ಜಿಗೆ ಜೊತೆ ಕುಡಿಯುವುದರಿಂದ ಮೂಲವ್ಯಾಧಿ ಗುಣವಾಗಲು ಸಹಕಾರಿ.
- ಹಿಪ್ಪಲಿ ಪುಡಿಯನ್ನು ಹಾಲು ಮತ್ತು ಅಡುಗೆಸೋಡ ರಸದಲ್ಲಿ ಬೆರೆಸಿ ಕುಡಿದರೆ ಹೊಟ್ಟೆ ಉಬ್ಬರ ಕಡಿಮೆಯಾಗುವಲ್ಲಿ ಸಹಕಾರಿ.
- ಹಿಪ್ಪಲಿಯ ಜೊತೆ ತುಪ್ಪ ಮತ್ತು ಜೇನುತುಪ್ಪ ಸೇರಿಸಿ ಹಲ್ಲು ಉಜ್ಜುವುದರಿಂದ ಹಲ್ಲುಗಳು ಜುಮ್ ಕಡಿಮೆ ಮಾಡುತ್ತದೆ.
- ಹಿಪ್ಪಲಿಯ ಬೇರನ್ನು ಅಕ್ಕಿಯಿಂದ ತಯಾರಿಸುವ ಬೀರ್‍ಗಳಲ್ಲಿ ಬುರುಗು ಬರಿಸಲು ಬಳಸುತ್ತಾರೆ.
- ಅಂಡಮಾನ್ ದ್ವೀಪಗಳಲ್ಲಿ ಹಿಪ್ಪಲಿಯ ಎಲೆಗಳನ್ನು ವೀಳ್ಯದೆಲೆಯಂತೆ ತಿನ್ನಲು ಬಳಸುತ್ತಾರೆ.
–ನಿವೇದಿತಾ ಸುರೇಶ್ ಸೋಲಾಪುರ
ಇದನ್ನೂ ಓದಿ
https://suddidina.com/lifestyle/uses-of-rose-water/
ಸುದ್ದಿದಿನ.ಕಾಂ|ವಾಟ್ಸಾಪ್|9980346243