ದಿನದ ಸುದ್ದಿ
ಜೀತಕ್ಕೆ ದಲಿತ ಮಹಿಳೆ ಎತ್ಯೊಯ್ದ ಪ್ರಕರಣ : ನ್ಯಾಯ ಒದಗಿಸಿದ ಮುತ್ತಯ್ಯಗೆ ಸನ್ಮಾನ
ಸುದ್ದಿದಿನ,ಮಂಡ್ಯ : ಜಿಲ್ಲೆಯ ಮದ್ದೂರು ತಾಲೂಕಿನ ಬೆಕ್ಕಳಲೆ ಗ್ರಾಮದಲ್ಲಿ ನಡೆದ ಜೀತ ಪ್ರಕರಣದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿದ ನ್ಯಾಯ ಒದಗಿಸಿದ ಜೀವಿಕ ಸಂಸ್ಥೆಯ ತಾಲ್ಲೂಕು ಅದ್ಯಕ್ಷರಾದ ಗೋಪನಹಳ್ಳಿ ಮುತ್ತಯ್ಯ ರವರೆಗೆ ಇಂದು ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ ಜೀವಿಕ ಸಂಸ್ಥೆಯ ಅಧ್ಯಕ್ಷರಾದ ಕಿರಣ್ ಕಮಲ್ ಪ್ರಸಾದ್ ರವರು ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಅವರು ಬೆಕ್ಕಳಲೆ ಗ್ರಾಮದಲ್ಲಿ ನಡೆದ ಪ್ರಕರಣವನ್ನು ನಮ್ಮ ಸಂಸ್ಥೆಯ ಮುಖಂಡರುಗಳು ಅತೀ ಜರೂರಾಗಿ ಸಮಾಜದ ಮುಖ್ಯವಾಹಿನಿಗೆ ತರಲು ತುಂಬಾ ಶ್ರಮವಹಿಸಿದರು ಈ ಒಂದು ಪ್ರಕರಣ ಇಡೀ ದೇಶದಲ್ಲಿ ತುಂಬಾ ಸುದ್ದಿಯಾಗಿತ್ತು, ತಕ್ಷಣ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂದೆ ಇಂತಹ ಪ್ರಕರಣಗಳು ಬೆಳಕಿಗೆ ಬಂದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಸಿದರು ನಂತರ ಈ ಪ್ರಕರಣದಲ್ಲಿ ನ್ಯಾಯ ಒದಗಿಸಿದಮಂಡ್ಯ ಜಿಲ್ಲೆಯ ಜೀವಿಕ ಸಂಸ್ಥೆಯ ಎಲ್ಲಾ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಿದರು ಸಭೆಯಲ್ಲಿ ಜಿಲ್ಲಾ ಸಂಚಾಲಕರು ತಾಲ್ಲೂಕು ಸಂಚಾಲಕರು ಹಾಗೂ ಇತರೆ ಮುಖಂಡರುಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401