ದಿನದ ಸುದ್ದಿ
ಮಲೆಮಹದೇಶ್ವರನಿಗೆ ಒಂದೇ ದಿನದಲ್ಲಿ 90 ಲಕ್ಷ ರೂ ಕಾಣಿಕೆ
ಸುದ್ದಿದಿನ, ಚಾಮರಾಜನಗರ : ಜಿಲ್ಲೆಯ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದಲ್ಲಿ ನಿನ್ನೆ ಮಣ್ಣೆತ್ತಿನ ಅಮಾವಾಸ್ಯೆಯಂದು ಭಕ್ತರು ಹೆಚ್ಚಿನ ಕಾಣಿಕೆಯನ್ನು ಸಮರ್ಪಿಸಿದ್ದಾರೆ.
90 ಲಕ್ಷದ 49 ಸಾವಿರದ 317 ರೂಪಾಯಿ ವಿವಿಧ ಸೇವೆ, ಲಾಡು ಮಾರಾಟದಿಂದ ಬಂದಿದೆ. ಭಾನುವಾರ ಒಂದೇ ದಿನ ಇಷ್ಟೊಂದು ಪ್ರಮಾಣದಲ್ಲಿ ಕಾಣಿಕೆ ಬಂದಿರುವುದು ಇದೇ ಮೊದಲು ಎಂದು ಮಲೆಮಹದೇಶ್ವರ ಸ್ವಾಮಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಪರ ಜಿಲ್ಲಾಧಿಕಾರಿ ಕಾತ್ಯಾಯನಿದೇವಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243