ದಿನದ ಸುದ್ದಿ
‘ಮನ್ಮಥ ವಿಜಯ’ ನಾಟಕಕ್ಕೆ ಟಾಂಗಾ ಪ್ರಚಾರ
ಸುದ್ದಿದಿನ ಡೆಸ್ಕ್: ಪೌರಣಿಕ ನಾಟಕಗಳಲ್ಲೇ ಅತಿ ಕಷ್ಟಕರ ನಾಟಕವೆಂದು ಹೇಳಾಗುವ ಮನ್ಮಥ ವಿಜಯ ನಾಟಕದ ಪ್ರದರ್ಶನವನ್ನು ಭಾನುವಾರ ರಂಗಾಯಣದಲ್ಲಿ ಪ್ರದರ್ಶಿಸಲಾಗುತ್ತಿದೆ.
ರಂಗಾಯಣ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳುತ್ತಿರುವ ಸಂಗೀತ ಪ್ರಧಾನದ ಕಂಪನಿ ಪೌರಣಿಕ ನಾಟಕ ಮನ್ಮಥ ವಿಜಯಕ್ಕೆ ಕಂಪನಿ ನಾಟಕದ ಶೈಲಿಯಲ್ಲೇ ಪ್ರಚಾರ ಮಾಡಲಾಗುತ್ತಿದ್ದು, ಇದೇ ಜು.29 ರಂದು ಸಂಜೆ 6.30ಕ್ಕೆ ರಂಗಾಯಣ ಭೂಮಿಗೀತದಲ್ಲಿ ಮೊದಲ ಪ್ರಯೋಗ ನಡೆಯಲಿದೆ ಎಂದು
ರಂಗಾಯಣ ನಿರ್ದೇಶಕಿ ಭಾಗೀರಥಿ ಭಾಯಿ ಕದಂ ತಿಳಿಸಿದ್ದಾರೆ.
ಮರೆಯಾಗಿತ್ತಿರುವ ಕಂಪನಿ ನಾಟಕಗಳು ಮತ್ತೊಮ್ಮೆ ಮರಕಳಿಸಲಿ ಎಂದು ನಾಟಕ ಏರ್ಪಡಿಸಿದ್ದೇವೆ. ಅದಕ್ಕಾಗಿ ಆ ಗತ ವೈಭವ ಮತ್ತೆ ಮುರುಕಳುಹಿಸಲಿಸದೆ. ಅದಕ್ಕಾಗಿ ಸೈಕಲ್ ಮತ್ತು ಕುದರೆ ಟಾಂಗ್‌ದಲ್ಲೇ ಪ್ರಚಾರ ನಡೆಸಲಾಗುತ್ತಿದೆ. ಈ ವಾರಂತ್ಯದಿಂದ ಆರಂಭವಾಗಿ ಕಲಾರಸಿಕರ ಬೇಡಿಕೆ ಇರುವವರಿಗೂ ಪ್ರತಿ ವಾರಂತ್ಯದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿ ಬೆನ್ನಿಗೇ ಟಂಗಾ ಗಾಡಿ, ಸೈಕಲ್ ನಲ್ಲಿ ಬಂದ ಕಲಾವಿದರು ಕರಪತ್ರಗಳನ್ನು ನೀಡಿ ನಾಟಕಕ್ಕೆ ಪ್ರಚಾರ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401