ಸಿನಿ ಸುದ್ದಿ

ದಾವಣಗೆರೆಯಲ್ಲಿ ‘ಮರಳಿ ಮನಸಾಗಿದೆ’ ಸಿನೆಮಾ ಮಹೂರ್ತ

Published

on

ಸುದ್ದಿದಿನ, ದಾವಣಗೆರೆ :ಬೆನಕ ಟಾಕೀಸ್ ಅರ್ಪಿಸುವ ಮರಳಿ ಮನಸಾಗಿದೆ ಚಲನಚಿತ್ರದ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ಶ್ರೀ ಕ್ಷೇತ್ರ ಅವರಗೊಳ್ಳ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗಣ್ಯರ ಹಿರಿಯರ ಹಿತೈಷಿಗಳ ಅಭಿಮಾನಿಗಳ ಸಮ್ಮುಖದಲ್ಲಿ ಡಾ.ರಾಜ್ ಕುಮಾರ್ ಹುಟ್ಟುಹಬ್ಬದಂದು ನೆರವೇರಿತು.

ಸಮಾರಂಭದಲ್ಲಿ ಡಾ.ಶಾಮನೂರು ಶಿವಶಂಕರಪ್ಪ ಹಾಲಿ ಶಾಸಕರು, ಸಂಸದ ಡಾ.ಜಿ.ಎಂ.ಸಿದ್ಧೇಶ್ವರ , ಮಾಜಿ ಶಾಸಕ ಬಿ.ಪಿ.ಹರೀಶ್ ,ಪೂಜ್ಯ ಮಹಾಪೌರರಾದ ಶ್ರೀಮತಿ ಜಯಮ್ಮ ಗೋಪಿನಾಯ್ಕ,ತೆಲಗಿ ಮಲ್ಲಿಕಾರ್ಜುನ್,ಬೀರೇಶ್, ನಿರ್ದೇಶಕ ನಾಗರಾಜ್ ಶಂಕರ್, ನಿರ್ಮಾಪಕರು ಆರ್.ಓ.ನವೀನ್ ಕುಮಾರ್, ಚಿತ್ರದ ನಾಯಕ ಮನೋಜ್, ನಾಯಕಿಯರಾದ ಸಮೀಕ್ಷಾ ಶೆಟ್ಟಿ, ಚಂದನಾ, ಸಹನಾರವಿ ,ಎಂ.ಜಿ.ಶಶಿಕಲಾಮೂರ್ತಿ ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭಹಾರೈಸಿದರು.

ಸಿನೆಮಾ‌ ಪೋಸ್ಟರ್

ಚಿತ್ರ ತಂಡದ ಮನವಿ

ಮುಂದೆ ಮುಟ್ಟುವ ಗುರಿಗೆ ಇಂದಿನ ಹೆಜ್ಜೆಗಳೇ ಸಾಕ್ಷಿ.
ಅದೇ ರೀತಿ ನಮ್ಮ ಬೆನಕ ಟಾಕೀಸಿನ ಮಹತ್ವಾಕಾಂಕ್ಷೆಯ ಚಿತ್ರ ಮರಳಿ ಮನಸಾಗಿದೆಯ ಮೂಹೂರ್ತ ದಾವಣಗೆರೆಯ ಅವರಗೊಳ್ಳ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು.ಅಭಿಮಾನಿಗಳೇ ದೇವರುಗಳು ಎಂಬ ಅಣ್ಣಾವ್ರ ಮಾತಿಗೆ ಸಾಕ್ಷಿಯಾಗಿತ್ತು ಅವರಗೊಳ್ಳ ಗ್ರಾಮ.

ಅಭಿಮಾನಿಗಳೇ ದೇವರುಗಳು ಎಂಬ ಅಣ್ಣಾವ್ರ ಮಾತಿಗೆ ಸಾಕ್ಷಿಯಾಗಿತ್ತು ಅವರಗೊಳ್ಳ ಗ್ರಾಮ…ನಮ್ಮ ಚಿತ್ರದ ಮೂಹೂರ್ತ ನೆರವೇರಿದ್ದು ಅಣ್ಣಾವ್ರ ಹುಟ್ಟು ಹಬ್ಬದ ದಿನ ಎನ್ನು. ಅಲ್ಲಿನ ಜನರ ಪ್ರೀತಿ ಮತ್ತು ದೇವರ ಆಶೀರ್ವಾದ ನಮ್ಮ ತಂಡದ ಮೇಲೆ ಸದಾ ಹೀಗೆಯೇ ಇರಲಿ ಎಂದು ಚಿತ್ರ ತಂಡ ಮನವಿ ಮಾಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version