ರಾಜಕೀಯ
ನಿಖಿಲ್ ಮತ್ತು ನಾನು ಈಗಲೂ-ಮುಂದೆಯೂ ಒಳ್ಳೆಯ ಗೆಳೆಯರು : ಅಭಿಷೇಕ್ ಅಂಬರೀಶ್
ಸುದ್ದಿದಿನ ಡೆಸ್ಕ್ : ನಿಜಕ್ಕೂ ಮಂಡ್ಯ ಲೋಕಸಭಾ ಚುನಾವಣೆ, ಚುನಾವಾಣೆಯಾಗಿ ಉಳಿದಿಲ್ಲ. ಅದು ಸುಮಲತಾ ಮತ್ತು ಜೆಡಿಎಸ್, ಕಾಂಗ್ರೆಸ್ ಪಾಲಿಗೆ ಚುನಾವಣಾ ಕದನವಾಗಿ ಮಾರ್ಪಟ್ಟಿದೆ. ಅಂಬರೀಶ್ ನಿಧನ ಹಾಗೂ ಮೈತ್ರಿಕೂಟ ಇದಕ್ಕೆ ನಿಜವಾದ ಕಾರಣ.
ಮಗನನ್ನು ಸಿನೆಮಾ ರಂಗದಲ್ಲಿ ನಾಯಕನಟನಾಗಿ ನೋಡಬೇಕು, ಸ್ಯಾಂಡಲ್ ವುಡ್ ನಲ್ಲಿ ತಳವೂರ ಬೇಕು ಎಂಬ ಕನಸು ಕಂಡಿದ್ದ ಎಚ್.ಡಿ.ಕೆ ಗೆ ನಿಜಕ್ಕೂ ಬೇಸರವಾಗಿದೆ. ಏಕೆಂದರೆ ನಿಖಿಲ್ ಮಾಡಿದ ಸಿನೆಮಾಗಳು ಓಡಿದ್ದು ಅಷ್ಟಕ್ಕಷ್ಟೆ. ನಟನೆಯೂ ಹೇಳಿಕೊಳ್ಳುವಂತಹದ್ದೇನಲ್ಲ. ಆ ಕಾರಣಕ್ಕೆ ಮಗನನ್ನು ರಾಜಕೀಯಕ್ಕೆ ತರಬೇಕೆಂಬ ಮನಸ್ಸು ಮಾಡಿ ಲೋಕಸಭಾ ಸಭಾ ಕಣಕ್ಕೆ ಮಂಡ್ಯದಿಂದ ಇಳಿಸಿ ಬಿಟ್ಟರು.
ಇತ್ತ ಮಂಡ್ಯದ ಅಂಬರೀಶ್ ಅಭಿಮಾನಿಗಳ ತೀವ್ರ ಒತ್ತಾಯದ ಮೇರೆಗೆ ಸುಮಲತ ಒಲ್ಲದ ಮನಸ್ಸಿನಿಂದ ಚುನಾವಣೆಗೆ ಸ್ಪರ್ಧಿಸಿ ಬಿಟ್ಟಿದ್ದಾರೆ. ಈ ನಡುವೆ ಯಶ್-ದರ್ಶನ್ ಸಾಥ್ ನೀಡಿದ್ದು, ಅವರ ಮನೆಗೆ ಕಲ್ಲು ಹೊಡೆದದ್ದು, ಹಾಗೇ ಯಾರೋ ಕಿಡಿಗೇಡಿಗಳು ನಿಖಿಲ್ ಕಾರಿಗೆ ಕಲ್ಲು ಒಡೆದದ್ದೂ ಆಯಿತು.
ಸರಿ ಇದೆಲ್ಲ ಒತ್ತಟ್ಟಿಗಿರಲಿ, ಇಂದು ಸುಮಲತಾ ಹಾಗೂ ಪುತ್ರ ಅಭಿಷೇಕ್ ಕೆ.ಆರ್. ನಗರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಮಾಧ್ಯಗಳೊಂದಿಗೆ ಮಾತನಾಡಿದ ಅಭಿಷೇಕ್, ರಾಜಕೀಯ ಅಂತ ಬಂದಾಗ ಪರ-ವಿರೋಧ ಎರಡೂ ಸಹಜ. ಇಲ್ಲಿ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ನಾನು ನಿಖಿಲ್ ಈಗಲೂ ಮುಂದೂ ಕೂಡ ಒಳ್ಳೆಯ ಗೆಳೆಯರು. ರಾಜಕೀಯವೇ ಬೇರೆ ನಮ್ಮ ಗೆಳೆತನವೇ ಬೇರೆ ಎಂದು ಹೇಳುವುದರ ಮೂಲಕ ಎಲ್ಲರ ಫ್ಯಾನ್ ಫಾಲೊಯಿಂಗ್ ಗೆ ಒಂದು ಉತ್ತಮ ಸಂದೇಶ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್ |9986715401