ದಿನದ ಸುದ್ದಿ
ನಾಡಹಬ್ಬ ಮೈಸೂರು ದಸರಾಕ್ಕೆ ಕ್ಷಣಗಣನೆ : ಸಕಲ ಸಿದ್ದತೆಯೊಂದಿಗೆ ಭಾರೀ ತಯಾರಿ..!
ಸುದ್ದಿದಿನ, ಮೈಸೂರು : ನಾಡಹಬ್ಬ ಮೈಸೂರು ದಸರಾಕ್ಕೆ ಕ್ಷಣಗಣನೆ ಆರಂಭವಾಗಿದೆ. ಉಸ್ತುವಾರಿ ಸಚಿವರಿಂದ ಗಣ್ಯರ ವೇದಿಕೆ ಸ್ಥಳ ವೀಕ್ಷಣೆ ಗೆ ತಯಾರಿನಡೆದಿದೆ. ಸಚಿವ ಜಿ.ಟಿ.ದೇವೇಗೌಡಗೆ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರ ಪೊಲೀಸ್ ಕಮೀಷನರ್ ಸುಬ್ರಹ್ಮಣ್ಯೇಶ್ವರ್ ರಾವ್ ಸಾಥ್ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಳೆ, ನಾಳಿದ್ದು ನಡೆಯುವ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದರು ಸಚಿವ ಜಿ.ಟಿ.ದೇವೇಗೌಡ.
ನಂತರ ಸಿದ್ಧತೆ ಪರಿಶೀಲಿಸಿ ಭದ್ರತೆ, ಬಗ್ಗೆ ಹೆಚ್ಚಿನ ಗಮನ ವಹಿಸುವಂತೆ ಅಧಿಕಾರಿಗಳಿಗೆ ಜಿಟಿಡಿ ಸೂಚನೆ ನೀಡಿದರು.
ಸ್ಥಳ ವೀಕ್ಷಣೆ ಬಳಿಕ ಸಚಿವ ಜಿ.ಟಿ. ದೇವೇಗೌಡ ಮಾತನಾಡಿ, ನಮ್ಮ ಕಾರ್ಯಕರ್ತರಿಂದ ಅಧಿಕಾರಿಗಳು, ಭದ್ರತಾ ಸಿಬ್ಬಂದಿಗೆ ತೊಂದರೆ ಇರೋದಿಲ್ಲ. ನಮ್ಮ ಕಾರ್ಯಕರ್ತರಾರೂ ಮೆರವಣಿಗೆಗೆ ಬರೋದಿಲ್ಲ. ನೂಕು ನುಗ್ಗಲೂ ಆಗೋದಿಲ್ಲ. ಕಲಾ ತಂಡಗಳು, ಸ್ತಬ್ಧ ಚಿತ್ರಗಳು ಸೇರಿದಂತೆ ಕಾರ್ಯಕ್ರಮ ಶಿಸ್ತಿನಿಂದ ನಡೆಯುತ್ತೆ.
ಜನರಿಗೆ ದಸರಾ ವೀಕ್ಷಿಸಲು ಸಿದ್ಧತೆ ಮಾಡಲಾಗುತ್ತಿದೆ ಎಂದರು.
ನಂತರ ಮಾತನಾಡಿದ ಅವರು, ರಾಜ್ಯಪಾಲರು, ಮುಖ್ಯಮಂತ್ರಿ ಕುಳಿತುಕೊಳ್ಳುವ ಸ್ಥಳ ವೀಕ್ಷಿಸಿದ್ದೇನೆ, ಎಲ್ಲವೂ ಸರಿಯಾಗಿ ಮಾಡಿದ್ದಾರೆ. ನಾಳೆ ಆಯುಧಪೂಜೆ, ನಾಳಿದ್ದು ದಸರಾ ಮಹೋತ್ಸವದ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗುತ್ತವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಟ್ಟಿಗೆ ಮಾತ್ನಾಡಿದ್ದೇನೆ.ಚಿನ್ನದ ಅಂಬಾರಿ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ ಪ್ರವಾಸಿಗರು. ದಸರಾ ಮಹೋತ್ಸವದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401