ದಿನದ ಸುದ್ದಿ

ನಾರಾಯಣ ಗೌಡರು ಯಾರು..? ಅಂದ ಸಚಿವ ಡಾ.ಸುಧಾಕರ್ ಕ್ಷಮೆಯಾಚಿಸಲೇ ಬೇಕು

Published

on

  • ದಿವ್ಯಶ್ರೀ.ವಿ, ಬೆಂಗಳೂರು

ತನ್ನ ಬದುಕಿನಲ್ಲಿ ಕಿಂಚಿತ್ತು ಸ್ವಾರ್ಥವಿಲ್ಲದೆ ನಮ್ಮ ನಾಡಿಗೋಸ್ಕರ ಕನ್ನಡಿಗರಿಗೋಸ್ಕರ ತಮ್ಮ ಬದುಕನ್ನು ಮುಡುಪಾಗಿಟ್ಟಿರುವ ಕೆಚ್ಚೆದೆಯ ಕನ್ನಡಿಗ ಎಂದರೆ ನಾರಾಯಣ ಗೌಡರು.

ಇವರೆಂದರೆ ಪುಟ್ಟ ಪುಟ್ಟ ಮಕ್ಕಳು ಕೂಡ ಗೊತ್ತು ಎನ್ನುತ್ತಾರೆ ಆದರೆ ಬೇಸರದ ಸ್ಥಿತಿ ಏನೆಂದರೆ ನಮ್ಮ ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ಮಾತ್ರ ನಮ್ಮ ಗೌಡ್ರು ಯಾರೆಂದು ಗೊತ್ತಿಲ್ಲ ಎನ್ನುವ ಮಾತು ನಿಜಕ್ಕೂ ಖಂಡನೀಯ.

ನಮ್ಮ ಕರ್ನಾಟಕದಲ್ಲಷ್ಟೇ ಅಲ್ಲದೆ ಇತರ ರಾಜ್ಯ ಮತ್ತು ದೇಶಗಳಿಗೆ ನಮ್ಮ ಗೌಡರು ಪರಿಚಯ ಅಂತಹುದರಲ್ಲಿ ನಮ್ಮ ರಾಜ್ಯದ ಸಚಿವರಿಗೆ ಗೊತ್ತಿಲ್ಲ ಎನ್ನುವುದು ಮೂರ್ಖತನ ಪರಮಾವಧಿ. ಇವರ ಹೇಳಿಕೆಯಿಂದ ಎಲ್ಲಾ ಕನ್ನಡಿಗರಿಗೆ ಕಾಡುವ ಪ್ರಶ್ನೆ ಎಂದರೆ ನಮ್ಮ ಸಚಿವರಾದ ಡಾ. ಸುಧಾಕರ್ ಅವರು ನಿಜಕ್ಕು ಕನ್ನಡಿಗರ ಎನ್ನುವುದು!

ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.facebook.com/tv5kannadatv/videos/119132520071641/

ಅಂದು ಬಾಗೇಪಲ್ಲಿಯಲ್ಲಿ ಜನರಿಗೆ ಕುಡಿಯುವ ನೀರಿನ ಕೊರತೆಯಾಗಿತ್ತು. ಬಾಗೇಪಲ್ಲಿ ಜನರಿಗೋಸ್ಕರ ಕುಡಿಯುವ ನೀರಿಗಾಗಿ ಚಿತ್ರಾವತಿ ನದಿಗೊಂದು ಅಣೆಕಟ್ಟು ನಿರ್ಮಿಸಲು ಅಂದಿನ ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ ಅಂದು ಆಂಧ್ರಪ್ರದೇಶದ ಸರ್ಕಾರ ಈ ಯೋಜನೆಗೆ ಕಿರುಕುಳ ಕೊಡಲು ‌ ಆರಂಭಿಸುತ್ತಾರೆ.

ಆದುದರಿಂದ ಬಾಗೇಪಲ್ಲಿಯಲ್ಲಾದರೂ ಅಣೆಕಟ್ಟು ಕಟ್ಟಲು ಪ್ರಾರಂಭಿಸುತ್ತಾರೆ. ಆದರೆ ಅಂದು ಬಂದಂತಹ ಬೆದರಿಕೆಯ ಮಾತುಗಳು ತೊಂದರೆಗಳನ್ನು ಎದುರಿಸಲು ಯಾರೊಬ್ಬರೂ ಮುಂದಾಗಲಿಲ್ಲ ಆಗಿದ್ದು ನಮ್ಮ ಗೌಡರು ಮಾತ್ರ.ಅಂದು ಎಂತಹ ಬೆದರಿಕೆ ಬಂದರು ಹೆದರದೆ ನೇರವಾಗಿ ಸ್ವೀಕರಿಸಿದ್ದು ಹೆಮ್ಮೆಯ ಕನ್ನಡಿಗ ನಾರಾಯಣಗೌಡರು.

ಯಾರ ಮಾತಿಗೂ ಅವರು ಹೆದರದೆ ಬಾಗೇಪಲ್ಲಿಯ ಅಣೆಕಟ್ಟು ನಿರ್ಮಾಣದ ಪರವಾಗಿ ತೀವ್ರ ಸ್ವರೂಪದ ಹೋರಾಟ ನಡೆಸಿದರು. ಬೆಂಗಳೂರಿನ ಕೆಂಪೇಗೌಡ ಪ್ರತಿಮೆಯಿಂದ ಬಾಗೇಪಲ್ಲಿಗೆ ತಮ್ಮ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಹೋರಾಟ ನಡೆಸಿದರು ಅಂದು ಹೊರಟ ಅತ್ಯಂತ ಯಶಸ್ವಿಯಾಗಿ ನಡೆಯಿತು. ಮತ್ತು ಯಾವುದೇ ತೊಂದರೆ ಇಲ್ಲದೆ ಹಣೆಕಟ್ಟು ಕೂಡ ನಿರ್ಮಾಣವಾಯಿತು. ‌

ಸಾವಿರಾರು ಜನರಿಗೆ ಕುಡಿಯುವ ನೀರಿನ ಸೌಲಭ್ಯವನ್ನು ನಮ್ಮ ಗೌಡರು ಮಾಡಿದ್ದಾರೆ. ಅಷ್ಟೇ ಅಲ್ಲದೆ ಅಣೆಕಟ್ಟಿನ ಮೊದಲ ಬಾಗಿನ ಪೂಜೆಯನ್ನು ನಮ್ಮ ಗೌಡರ ಕೈಯಿಂದ ನೆರವೇರಿದೆ ಇದೆಲ್ಲವೂ ಡಾ.ಸುಧಾಕರ್ ಅವರು ರಾಜಕೀಯಕ್ಕೆ ಬರುವ ಮುಂಚೆಯೇ ಆಗಿರುವ ಘಟನೆ.

ಚಿಕ್ಕಬಳ್ಳಾಪುರದಲ್ಲಿ ಹುಟ್ಟಿದ ನಮ್ಮ ಸಚಿವರಿಗೆ ಯಾರಿಗೋಸ್ಕರ ಯಾರು ಏನು ಮಾಡಿದರು ಎಷ್ಟು ಸಹಾಯ ಮಾಡಿದರು ಎಂದು ಪ್ರಜ್ಞೆಯಿಲ್ಲ. ತಮ್ಮಊರಲ್ಲಿ ಅಣೆಕಟ್ಟೆ ಗಾಗಿ ಹೋರಾಡಿದ ವ್ಯಕ್ತಿಯ ಹೆಸರು ಕೂಡ ಗೊತ್ತಿಲ್ಲ ಎಂದರೆ ಇವರೆಂತಹ ಸಚಿವರು ತಮ್ಮ ಊರಿನ ಬಗ್ಗೆ ಗೊತ್ತಿಲ್ಲ ಇನ್ನೂ ರಾಜ್ಯಕ್ಕೆ ಏನು ಮಾಡುವರು ಎನ್ನುವುದು ಯಕ್ಷಪ್ರಶ್ನೆಯಾಗಿದೆ. ನಮ್ಮ ಸಚಿವರು ಈ ಹೇಳಿಕೆಗೆ ಕನ್ನಡಿಗರ ಮುಂದೆ ಮುಖ್ಯವಾಗಿ ಕರವೇ ಕಾರ್ಯಕರ್ತರ ಮುಂದೆ ಕ್ಷಮೆಯನ್ನು ಯಾಚಿಸಲೇಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version