ದಿನದ ಸುದ್ದಿ

ದೇವಸ್ಥಾನಗಳಿಂದ ಬರುವ ಆದಾಯ ಸರ್ಕಾರದ ಖಜಾನೆಗೆ ಬರುವುದಿಲ್ಲ : ಸಚಿವ ಪಿ.ಟಿ.‌ಪರಮೇಶ್ವರ ನಾಯ್ಕ್

Published

on

ಸುದ್ದಿದಿನ, ಬಳ್ಳಾರಿ : ರಾಜ್ಯದ ದೇವಸ್ಥಾನಗಳಿಂದ ಬರುವ ಆದಾಯ ಸರ್ಕಾರದ ಖಜಾನೆಗೆ ಬರುವುದಿಲ್ಲ ಎಂದು ಕೌಶಲ್ಯಾಭಿವೃದ್ಧಿ ಮತ್ತು ಮುಜರಾಯಿ ಇಲಾಖೆ ಸಚಿವ ಪಿ. ಟಿ. ಪರಮೇಶ್ವರ ನಾಯ್ಕ್ ಸುದ್ದಿಗೋಷ್ಟಿಯಲ್ಲಿ ಇಂದು ತಿಳಿಸಿದರು.

ಆ ಹಣ ದೇವಸ್ಥಾನದ ಮೇಲುಸ್ತುವಾರಿ ಸಮಿತಿಯ ಖಾತೆಯಲ್ಲೇ ಇರುತ್ತದೆ, ಸಮಿತಿ ಸಲ್ಲಿಸುವ ಕ್ರಿಯಾ ಯೋಜನೆಗೆ ಹಣವನ್ನು ಬಿಡುಗಡೆಗೆ ಅನುಮತಿ ನೀಡುತ್ತೇವೆ,ಅಭಿವೃದ್ಧಿ ಕಾಮಗಾರಿಯ ಮೊತ್ತ ದೊಡ್ಢದಿದ್ದಲ್ಲಿ, ಜಿಲ್ಲಾಧಿಕಾರಿಗಳಿಗೆ ಸರ್ಕಾರ ಅನುಮತಿ ನೀಡುತ್ತದೆ ಎಂದರು.

ರಾಜ್ಯದ ದೇವಸ್ಥಾನಗಳ ಆದಾಯವನ್ನು ದೇವಸ್ಥಾನಗಳ ಅಭಿವೃದ್ಧಿಗೇ ಬಳಸಲಾಗುತ್ತಿದೆ, ಬೇರೆ ಧರ್ಮದ ಧಾರ್ಮಿಕ ಉದ್ಧೇಶಗಳಿಗೆ ಬಳಸಲಾಗುತ್ತಿದೆ ಎಂದು ನುಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version