ಲೈಫ್ ಸ್ಟೈಲ್
‘ಗೋಲ್ಗಪ್ಪಾ, ಪಾನಿಪುರಿ, ಗಪ್ ಚುಪ್’ ರೆಸಿಪಿ ಇಲ್ಲಿದೆ ಮಾಡಿ ನೋಡಿ..!
- ಶಶಿಕಲಾ ಸುನೀಲ್
ಬೇಕಾಗುವ ಸಾಮಗ್ರಿಗಳು
- ಚಿರೋಟಿ ರವೆ – 2 ಕಪ್
- ಮೈದಾ – 3 ಸ್ಪೂನ್
- ಅಡಿಗೆ ಸೋಡಾ – ಚಿಟಕೆ
- ಆಲೂಗಡ್ಡೆ – 3 (Medium size)
- ಬೆಂದ ಕಡಲೆಕಾಳು – 1 ಬಟ್ಟಲು
- ಈರುಳ್ಳಿ – 1
- ಹಸಿ ಮೆಣಸಿನಕಾಯಿ – 2
- ಶುಂಠಿ – 2 ಇಂಚು
- ಕೊತ್ತಂಬರಿ ಸೊಪ್ಪು – 1ಕಪ್
- ಗರಂ ಮಸಾಲಾ – 1 ಸ್ಪೂನ್
- ಆಮ್ ಚೂರ್ ಪುಡಿ – ಅರ್ಧ ಸ್ಪೂನ್
- ಜಲ್ ಜೀರಾ ಪುಡಿ – 2 ಸ್ಪೊನ್
- ಅಚ್ಚ ಖಾರದ ಪುಡಿ – ಅರ್ಧ ಸ್ಪೂನ್
- Rock salt – 1 ಸ್ಪೂನ್
- ಚಾಟ್ ಮಸಾಲಾ ಪುಡಿ – 1 ಸ್ಪೂನ್
- ಬೆಲ್ಲ – ನಿಂಬೆ ಗಾತ್ರ
- ನಿಂಬೆಹಣ್ಣು- ಅರ್ಧ ಹೋಳು
- ಉಪ್ಪು ರುಚಿಗೆ
- ಮೊದಲನೆ ಹಂತ :ಪೂರಿ
ಚಿರೋಟಿ ರವೆ, 2 ಸ್ಪೂನ್ ಮೈದಾ, ಚಿಟಕೆ ಸೋಡಾ, ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ನಾದಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ನಂತರ 30 ನಿಮಿಷ ನೆನೆಯಲು ಬಿಡಿ.
ನಂತರ ತೆಳ್ಳಗೆ ಲಟ್ಟಿಸಿ ನಿಮ್ಮ ಆಯ್ಕೆಯ ಮುಚ್ಚುಳದಿಂದ ಕಟ್ ಮಾಡಿ.ಕಾದ ಎಣ್ಣೆಯಲ್ಲಿ ಕರಿಯಿರಿ. (ಕಟ್ ಮಾಡಿದ ಹಿಟ್ಟನ್ನು ಒಣಗಲು ಬಿಡಬೇಡಿ)
- ಎರಡನೇ ಹಂತ : ಮೆದು ಮಾಡುವುದು
ಒಂದು ಪಾತ್ರೆಗೆ ಬೆಂದ ಆಲೂಗಡ್ಡೆ, ಬೆಂದ ಕಡಲೆಕಾಳು ಹಾಕಿ ಮ್ಯಾಷ್ ಮಾಡಿ. ಅದಕ್ಕೆ ಹೆಚ್ಚಿದ ಈರುಳ್ಳಿ, ಶುಂಠಿ + ಹಸಿಮೆಣಸಿನಕಾಯಿ + ಕೊತ್ತಂಬರಿ ಹಾಕಿ ಗ್ರೀನ್ದ್ ಮಾಡಿದ ಪೇಸ್ಟ್, ಗರಂ ಮಸಾಲಾ ಪುಡಿ, ಆಮ್ ಚೂರ್ ಪುಡಿ, ಚಾಟ್ ಮಸಾಲಾ ಪುಡಿ, ಅಚ್ಚ ಖಾರದ ಪುಡಿ,ಕೊತ್ತಂಬರಿ ಸೊಪ್ಪು ಹಾಕಿ ಕಲಸಿ.
- ಮೂರನೆ ಹಂತ : ಪಾನಿಪುರಿ ಪಾನಿ
ಮಿಕ್ಸಿ ಜಾರ್ ಗೆ 2 ಹಸಿ ಮೆಣಸಿನಕಾಯಿ, ಕೊತ್ತಂಬರಿ, ಶುಂಠಿ ಹಾಕಿ ರುಬ್ಬಿ ಸೋಸಿರಿ. ಅದಕ್ಕೆ ನಿಮ್ಮ ರುಚಿಗೆ ನೀರು ಸೇರಿಸಿ ಜಲಜೀರ ಪುಡಿ, Rock salt, ಚಾಟ್ ಮಸಾಲಾ, ಬೆಲ್ಲ, ಹೆಚ್ಚಿದ ಕೊತ್ತಂಬರಿ ಹಾಕಿ ರುಚಿ ನೋಡಿ ನೀರು ಬೆರೆಸಿ.ಪೂರಿಯೊಳಗೆ ಆಲೂ ಮಿಶ್ರಣ stuff ಮಾಡಿ ಪಾನಿಯೊಂದಿಗೆ ಸವಿಯಿರಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243