ಅಂತರಂಗ

ಹತ್ತಾರು ಕಲೆಗಳ ಖಜಾನೆ : ಯುವ ಕವಿ ತೇಜಸ್

Published

on

ವೈಯಕ್ತಿಕವಾಗಿ ಹೇಳಬೇಕೆಂದರೆ ನನ್ನ ಪಾಲಿಗಿದೊಂದು ಹೇಳಲು ಅತ್ಯಂತ ಸಂತೋಷ ಪಡಬೇಕಾದ ಹೆಮ್ಮೆಯ ಸಂಗತಿ .

ತಮ್ಮ ವಿದ್ಯಾರ್ಥಿಗಳು ತಮಗಿಂತಲೂ ಎತ್ತರವಾಗಿ ಬೆಳೆದು ನಿಂತು – ” ಇಗೋ ಹೀಗಿದೆ ನೋಡಿ ನಾವು ಸಾಗುತ್ತಿರುವ ಹಾದಿ, ಇದೋ ಇಲ್ಲಿದೆ ನೋಡಿ ನಮ್ಮ ಸಾಧನೆ & ಪರಿಶ್ರಮದ ದ್ಯೋತಕವೆಂದು ” ಮಾತಿಗಿಂತ ಕೃತಿಯಲ್ಲಿ ಮಾಡಿ ತೋರಿ ಎದುರು ನಿಂತಾಗ …. ಯಾವ ಶಿಕ್ಷಕರಿಗಾದರೂ ಹೆಮ್ಮೆಯ ಭಾವ ಒಡಮೂಡದಿದ್ದೀತೆ… !!??

ಪ್ರಸ್ತುತ ಏರೋನಾಟಿಕಲ್ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ಈತ ಬಾಲ್ಯದಿಂದಲೂ ಸದಾ ಓದಿನಲ್ಲಿ ಮುಂದು. ಶಾಲಾ – ಕಾಲೇಜು & ಸ್ನೇಹ ವಲಯದಲ್ಲಿ ಮಿತಭಾಷಿ – ಮೃದುಭಾಷಿ, ಸಾಧು ಸ್ವಭಾವದವನೆಂದೇ ಗುರುತಿಸಿ ಕೊಂಡಿರುವ ಈತ ಪೋಷಕರ ಬೆಂಬಲದೊಂದಿಗೆ ಇಂದು ತನ್ನ ಸ್ವರಚಿತ ಕವನಗಳ ಸಂಕಲನ ಹೊರತರುವ ಮಟ್ಟಕ್ಕೆ ಬೆಳೆದಿದ್ದಾನೆ. ತಾ ಬರೆದ ಕವಿತೆಗಳಿಗೆ ರಾಗ ಸಂಯೋಜನೆ ಮಾಡಿ ಹಾಡುತ್ತಾನೆ ಕೂಡ. ಅಷ್ಟೇ ಅಲ್ಲದೆ ತಬಲ ವಾದನದೊಂದಿಗೆ ವಿವಿಧ ಮಧುರ ರಾಗ – ತಾಳಗಳ ಹೊಮ್ಮಿಸುತ್ತಾನೆ,, ಹಲಗೆ ಕೂಡ ಬಾರಿಸಿ ಬೆರಗು ಮೂಡಿಸುತ್ತಾನೆ.

ಇಂತಹ ಅದ್ಭುತ ಪ್ರತಿಭೆಯಾದ ದಾವಣಗೆರೆ ತೇಜಸ್ ಜಿ. ಎಲ್ ವಡ್ನಾಳ್ ಅವರ ಚೊಚ್ಚಲ ಕವನ ಸಂಕಲನ “ಮುಗಿಲ ಹೆಗಲ ಮೇಲೆ ” ಇದೇ ಅಕ್ಟೋಬರ್ 21 ನೇ ತಾರೀಕು ದಾವಣಗೆರೆ ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಲೋಕಾರ್ಪಣೆಗೊಳ್ಳಲಿದೆ .

ದಾವಣಗೆರೆಯ ಖ್ಯಾತ ಸಾಹಿತಿ ಡಾ.ಎ.ಬಿ ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಹಿರಿಯ ಸಾಹಿತಿಗಳಾದ ಪ್ರೊ. ಎಸ್ .ಬಿ ರಂಗನಾಥ್ ಉದ್ಘಾಟಿಸಲಿದ್ದು , ಖ್ಯಾತ ಸಾಹಿತಿ ಚಂದ್ರಶೇಖರ್ ತಾಳ್ಯ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಸಾಹಿತಿ ದಾವಣಗೆರೆ ಡಾ. ಆನಂದ ಋಗ್ವೇದಿಯವರು ಕೃತಿ ಕುರಿತು ಮಾತನಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ವಿಶ್ರಾಂತ ಡಿಡಿಪಿಐ ಶಿವಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರುಗಳಾದ ಪರಮೇಶ್ವರಪ್ಪ ಮತ್ತು ಹೆಚ್. ಕೆ ಲಿಂಗರಾಜು, ಕಸಾಪ ಗೌರವ ಕಾರ್ಯದರ್ಶಿ ಬಿ. ದಿಳ್ಯಪ್ಪ ಹಾಗೂ ಹರಿಹರ ತಾಲ್ಲೂಕು ಕಸಾಪ ಅಧ್ಯಕ್ಷರಾದ ರೇವಣಸಿದ್ದಪ್ಪ ಅಂಗಡಿ ಆಗಮಿಸಲಿದ್ದಾರೆ.

ಬನ್ನಿ ನೀವೂ ಸಹ ಬಂದಾರೈಸಿ – ಬಹುಮುಖಿ ಪ್ರತಿಭೆಯ ಈ ಕಿಶೋರನ ಮತ್ತಷ್ಟು ಹೊಸ ಸಾಧನೆಗೆ ಪ್ರೋತ್ಸಾಹಿಸಿ .

– ಗಂಗಾಧರ ಬಿ ಎಲ್ ನಿಟ್ಟೂರ್

Trending

Exit mobile version