ದಿನದ ಸುದ್ದಿ
ಸಂಸತ್ತಿನ ಕಡೆಗೆ ಪ್ರಭಾ ನಡಿಗೆ
- ಶ್ರೀಮತಿ ಎಂ.ಜಿ ಶಶಿಕಲಾ ಮೂರ್ತಿ,ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ, ಬಸವಾಪಟ್ಟಣ
ದಾವಣಗೆರೆ ಬೆಣ್ಣೆ ದೋಸೆ, ಕಾಟನ್ ಸಿಟಿ ,ವಾಣಿಜ್ಯ ನಗರಿ, ವಿದ್ಯಾ ಕಾಶಿ ,ಮಧ್ಯೆ ಕರ್ನಾಟಕ ಅದೇ ರೀತಿ ಶಾಮನೂರು ಶಿವಶಂಕರಪ್ಪ ಕುಟುಂಬ ಎಂದೇ ಖ್ಯಾತಿ ಪಡೆದಿರುವ ಅದೇ ಮನೆತನದ ಮನೆ ಬೆಳಗುವ ಸೊಸೆಯಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅಕ್ಕನವರು ಈ ಬಾರಿ ಲೋಕಸಭಾ ಚುನಾವಣೆಯ ಕೇಂದ್ರಬಿಂದುವಾಗಿ ಅಖಾಡದಲ್ಲಿ ಇದ್ದಾರೆ.
ಸುಸಂಸ್ಕೃತ ಮನೆತನದ ಸಂಸ್ಕಾರವುಳ್ಳ ವಿದ್ಯಾವಂತೆ,ಆಚಾರವಂತೆ ವಿಚಾರವಂತೆ , ವೈಚಾರಿಕತೆ, ಸುಶಿಕ್ಷಿಸುತೆ , ನಗುಮೊಗದ ಅಕ್ಕ. ಸದಾ ಜನರ ಸೇವೆ , ಎಸ್ .ಎಸ್ ಕೇರ್ ಟ್ರಸ್ಟ್ ಕಾರ್ಯದ ಮೂಲಕ ಉಚಿತ ಆರೋಗ್ಯ ತಪಾಸಣೆ, ಸ್ತನ ಕ್ಯಾನ್ಸರ್ ತಪಾಸಣೆ, ಡಯಾಲಿಸಿಸ್ ಚಿಕಿತ್ಸೆ, ಬಾಪೂಜಿ ಆರೋಗ್ಯ ಕಾರ್ಡ್ ಮೂಲಕ ಕ್ಷೇತ್ರದ ಜನರ ಆರೋಗ್ಯ ಕಾಳಜಿ ಜೊತೆ ಜೊತೆಗೆ ಬಡವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದಾರೆ.
ರಾಜಕೀಯವಾಗಿ ಮಾವನವರಾದ ಶಾಮನೂರು ಶಿವಶಂಕರಪ್ಪ ಅಪ್ಪಾಜಿ ಮತ್ತು ಪತಿಯವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರ ಜೊತೆಗೆ ರಾಜಕೀಯದ ಅರಿವು ಮತ್ತು ಜನರ ಸೇವೆ ಮೂಲಕ ದಾನ ಧರ್ಮದ ಕಾರ್ಯವನ್ನು ಮಾಡುತ್ತಾ ಅಷ್ಟೇ ಅಲ್ಲದೆ ಸ್ವತಃ ಕ್ಷೇತ್ರದ ಪ್ರಜ್ಞಾವಂತ ಮತದಾರರಿಗೆ, ಮಹಿಳೆಯರಿಗೆ, ಯುವಕರಿಗೆ, ವಿದ್ಯಾರ್ಥಿಗಳಿಗೆ ,ರೈತರಿಗೆ, ಕೂಲಿಕಾರ್ಮಿಕರಿಗೆ, ನೌಕರಿ ವರ್ಗದವರಿಗೆ ಮತ್ತು ಎಲ್ಲಾ ವರ್ಗದ ಜನರಿಗೆ ಯಾವ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂದು ಪ್ರಭಾ ಪ್ರಣಾಳಿಕೆ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅವರು ಮುಂದಿನ ಯೋಜನೆಗಳನ್ನು ಸಾಕಾರಗೊಳಿಸಲು ಈ ಬಾರಿ ನಾವು ನೀವು ಗಳೆಲ್ಲರೂ ಸಕಾರಾತ್ಮಕವಾಗಿ ಅವರಿಗೆ ನಮ್ಮ ಅಮ್ಯೂಲವಾದ ಮತನ್ನೂ ನೀಡುವುದರ ಜೊತೆಗೆ ಸಂಸತ್ತು ಭವನದಲ್ಲಿ ನಮ್ಮ ದೇಶವೇ ಹೆಮ್ಮೆ ಪಡುವಂತ ಮೌಲ್ಯಯುತ ರಾಜಕಾರಣಿ ಆಗಲಿ ಎಂದು ಶುಭ ಹಾರೈಸೋಣ.
ಧನ್ಯವಾದಗಳು
ಸುದ್ದಿದಿನ.ಕಾಂ|ವಾಟ್ಸಾಪ್|9980346243