ಲೋಕಾರೂಢಿ

ಪ್ರಕಾಶ್ ರೈ ಯಾಕೆ ಗೆಲ್ಲಬೇಕೆಂದರೆ…!

Published

on

ಇಂದು  ಪ್ರಕಾಶ ರೈ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಅವರು ಗೆಲ್ಲಲಿ ಎಂಬ ಆಸೆ. ಏಕೆಂದರೆ:

  1. ರಾಷ್ಟ್ರೀಯ ರಾಜಕೀಯ ಪಕ್ಷಗಳು ಈವತ್ತಿನ ಜಾಗತೀಕರಣಗೊಂಡ ಹಳ್ಳಿ-ಪಟ್ಟಣಗಳ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಮತ್ತು ತಮ್ಮ ಈ ವೈಫಲ್ಯವನ್ನು ಮುಚ್ಚಿಕೊಳ್ಳಲು, ರಾಷ್ಟ್ರರಾಜಕಾರಣದತ್ತ ಬೊಟ್ಟುಮಾಡಿ, ನಿಜ ಸಮಸ್ಯೆಗಳನ್ನು ಮರೆಮಾಚುತ್ತಿವೆ.
  2. ರಾಷ್ಟ್ರ ರಾಜಕಾರಣದ ಬ್ರಾಡ್ ಪಿಕ್ಚರ್ ತೋರಿಸುತ್ತಾ ಸ್ಥಳೀಯ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿ ತಮ್ಮದೇ ಅಭ್ಯರ್ಥಿಗಳನ್ನು ಹೇರುವುದು ಪ್ರಜಾತಂತ್ರದಲ್ಲಿ ಜನಪ್ರತಿನಿಧಿಗಳ ಆಯ್ಕೆಗೆ ಬಗೆಯುವ ದ್ರೋಹ. ಜನರದಲ್ಲದ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನತೆಗೆ ನ್ಯಾಯ ಒದಗಿಸಲಾರರು.
  3. ದೇಶದ ಎರಡೂ ಪ್ರಮುಖ ರಾಷ್ಟ್ರೀಯ ಪಕ್ಷಗಳು ಪಕ್ಷೇತರರು ತಮ್ಮಲ್ಲಿ ಒಬ್ಬರ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತಾರೆ ಎಂದು ಪರಿಗಣಿಸುವುದು ಸಹಜ, ಆದರೆ ತಾತ್ಕಾಲಿಕ. ಇದಕ್ಕೆ ಒಳ್ಳೆಯ ಉದಾಹರಣೆ ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ಯಶಸ್ಸು. ಪ್ರಜಾತಂತ್ರದಲ್ಲಿ ಇದೊಂದು ಸಹಜ ಬೆಳವಣಿಗೆಯೇ ಹೊರತು ಅಪಸವ್ಯ ಅಲ್ಲ.
  4. ರಾಷ್ಟ್ರೀಯ ಪಕ್ಷಗಳು ಪ್ರತೀ ರಾಜ್ಯದಲ್ಲಿ ಇಂತಹ ಕೆಲವು ಸೀಟುಗಳಲ್ಲಾದರೂ ಇಂತಹದೊಂದು ಔದಾರ್ಯ ತೋರಬೇಕು. ಕರ್ನಾಟಕದಲ್ಲಿ ಪ್ರಕಾಶ್ ರೈ ( Prakash Raj(ಬೆಂಗಳೂರು ಸೆಂಟ್ರಲ್), ದ್ವಾರಕಾನಾಥ ಚೊಕ್ಕ (Dwarakanath Chokka) (ಚಿಕ್ಕಬಳ್ಳಾಪುರ) ನನ್ನ ಪ್ರಕಾರ ಈ ರೀತಿಯ ಔದಾರ್ಯ ಅಗತ್ಯ ಇರುವ ಸೀಟುಗಳು.
  5. ದೀರ್ಘಕಾಲಿಕವಾಗಿ ಪ್ರಜಾತಂತ್ರ ಜೀವಂತ ಉಳಿಯಲು ಇಂತಹ ಕೆಲವು ಸೀಟುಗಳು ಆರಿಸಿಬರಬೇಕು ಮತ್ತು ಅದರಿಂದ ಸ್ಪೂರ್ತಿ ಪಡೆದು ಹೊಸ ನಾಯಕತ್ವಗಳು ನೆಲದಿಂದ ಚಿಗುರುವಂತಾಗಬೇಕು. ನಾಯಕತ್ವ ಆಕಾಶದಿಂದ ಉದುರುವುದು ನಿಲ್ಲಬೇಕು.

ರಾಜಾರಾಮ್ ತಲ್ಲೂರ್

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version