ದಿನದ ಸುದ್ದಿ

ಗಣರಾಜ್ಯೋತ್ಸವಕ್ಕೆ ಭಾರೀ ಸಿದ್ಧತೆ..!

Published

on

ದೇಶದಾದ್ಯಂತ ಗಣರಾಜ್ಯೋತ್ಸವಕ್ಕೆ ಬರದಿಂದ ನಡೆದಿದೆ. ಹೌದು ನಾಡಿನಲ್ಲಿ ಸಿದ್ದತೆ ನಡೆದಿದೆ. ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಹಾಗೂ ಕಲೇಜಿನ ವಿದ್ಯಾರ್ಥಿಗಳು ಸಾಂಸ್ಕøತಿಕ ಮನರಂಜನೆ ನೀಡಲು ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ, ನೃತ್ಯ, ಕಿರುನಾಟಕ, ಸಾಮುಹಿಕ ನಾಟಕ, ಸಾಮುಹಿಕ ನೃತ್ಯ, ಭಾವಗೀತೆ, ದೇಶಭಕ್ತಿ ಗೀತೆ, ಹಾಗೂ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅಥಿತಿಗಳಿಗೆ ಗೌರವ ನೀಡಲೇಂದು ಫೇರಡ್‍ಗೆ ಸ್ಕೌಟ್ಸ ಮತ್ತು ಗೈಡ್ಸನ ವಿದ್ಯಾರ್ಥಿಗಳು ತಯಾರಿ ನಡೆಸುತ್ತಿದ್ದಾರೆ ಹಾಗೂ ವಿವಿಧ ಸಂಸ್ಕøತಿಯನ್ನು ಸಾರುವ ಸ್ತಬ್ದಚಿತ್ರಗಳ ಪ್ರದರ್ಶನಕ್ಕೆ ಸಜ್ಜಾಗಿವೆ.

ಈ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ನಮ್ಮನ್ನು ಕಾಯುವ ಆರಕ್ಷರು ಹಾಗೂ ಸೈನಿಕರು ಬೇಕ್ ರೈಡ್, ಅಶ್ವಧಳ, ಶಶ್ತ್ರಗಳ ಪ್ರದರ್ಶನ ಹಾಗೂ ವಾಯುದಳದಿಂದ ಬಾನಂಗಳದಲ್ಲಿ ಮನಮೋಹಕವಾದ ಲೋಹದ ಹಕ್ಕಿಗಳ ಹಾರಾಟ ಹೀಗೆ ಅನೇಕ ರೀತಿಯಲ್ಲಿ ಸಜ್ಜಾಗುತ್ತಿದ್ದಾರೆ. ಮತ್ತೊಂದು ಕಡೆ ತ್ರೀವರ್ಣಗಳ ಧ್ವಜ, ಟೋಪಿ, ಬಳೆ, ಮಕ್ಕಳ ಆಕರ್ಷಕ ಬೊಂಬೆಗಳು ಮಾರುಕಟ್ಟೆಯಲ್ಲಿ ಲಗ್ಗೆಯಿಟ್ಟಿವೆ. ಇವುಗಳ ಖರೀದಿಯಲ್ಲಿ ಜನರು ತಮ್ಮನ್ನು ತೋಡಗಿಸಿಕೊಂಡು, ಹರ್ಷವ್ಯಕ್ತ ಪಡಿಸುತ್ತಿದ್ದಾರೆ. ನಗರದ ಪ್ರಮುಖ ವೃತ್ತ, ಅಂಗಡಿಗಳು ಬಣ್ಣ-ಬಣ್ಣದ ಚಿತ್ತಾರ ದೀಪಾಲಂಕಾರ ಮಾಡುತ್ತಾ ಸಜ್ಜಾಗುತ್ತಿದೆ.

-ಕಾಂಚನಾ. ಬಸವರಾಜ. ಪೂಜಾರಿ
ಪತ್ರಿಕೋದ್ಯಮ ಮತ್ತು ಸಮುಹ ಸಂವಹನ ವಿಭಾಗ
ಪ್ರಥಮ ವರ್ಷದ ವಿದ್ಯಾರ್ಥಿನಿ
ಅಕ್ಕ ಮಹಾದೇವಿ ವಿಶ್ವವಿದ್ಯಾನಿಲಯ ತೋರವಿ
ವಿಜಯಪುರ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version