ದಿನದ ಸುದ್ದಿ
ಮೀಸಲಾತಿ ಪ್ರಮಾಣ ಹೆಚ್ಚಿಸಲು ಸಮಿತಿ ರಚನೆ
ಸುದ್ದಿದಿನ,ಬೆಂಗಳೂರು : ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಿಗೆ ಈಗಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಕುರಿತು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದೆ.
ಸಮಿತಿಗೆ ಆಸಕ್ತ ಸಾರ್ವಜನಿಕರು ಸಂಬಂಧಿಸಿದ ಸಮುದಾಯಗಳು, ಸಂಘ-ಸಂಸ್ಥೆಗಳು, ವಿದ್ವಾಂಸರು, ಸಾಮಾಜಿಕ ಕಾರ್ಯಕರ್ತರು, ಸೇರಿದಂತೆ ಎಲ್ಲರೂ ಮನವಿ ಅಥವಾ ಅಹವಾಲುಗಳನ್ನು, ವರದಿಗಳನ್ನು, ಬೇಡಿಕೆಗಳನ್ನು ಲಿಖಿತ ರೂಪದಲ್ಲಿ ಸಂಕ್ಷಿಪ್ತವಾಗಿ ಡಿಸೆಂಬರ್ 20 ರ ಒಳಗೆ ಅಂಚೆ ಮೂಲಕ ಅಥವಾ ನ್ಯಾಯಮೂರ್ತಿ, ಎಚ್. ಎನ್ ನಾಗಮೋಹನದಾಸ್ ಆಯೋಗ, ಕಲ್ಯಾಣ ಕೇಂದ್ರ, ಯವನಿಕ ಆವರಣ, ಸಮಾಜ ಕಲ್ಯಾಣ ಇಲಾಖೆ, ನೃಪತುಂಗ ರಸ್ತೆ, ಬೆಂಗಳೂರು- 560001 ಕ್ಕೆ ಸಲ್ಲಿಸುವಂತೆ ಆಯೋಗದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243