ದಿನದ ಸುದ್ದಿ
ದಾವಣಗೆರೆ | ಕ್ವಿಂಟಾಲ್ ಗೆ 1815 ರೂರಂತೆ ಭತ್ತ ಖರೀದಿಸಲು ಜಿಲ್ಲಾಧಿಕಾರಿ ಮನವಿ
ಸುದ್ದಿದಿನ,ದಾವಣಗೆರೆ : ಕೇಂದ್ರ ಸರ್ಕಾರದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಾಲ್ ಭತ್ತಕ್ಕೆ ರೂ.1815 ನಿಗದಿಪಡಿಸಲಾಗಿದ್ದು, ಮಾರುಕಟ್ಟೆಯಲ್ಲಿ ಈ ದರಕ್ಕಿಂತ ಕಡಿಮೆ ಬೆಲೆಯಲ್ಲಿ ರೈತರಿಂದ ಭತ್ತವನ್ನು ಖರೀದಿಸಲಾಗುತ್ತಿದೆ.
ಆದರೆ ರೈತರನ್ನು ಉತ್ತೇಜಿಸಲು ಮತ್ತು ನಷ್ಟದಿಂದ ಪಾರು ಮಾಡಲು ವರ್ತಕರು ನಿಗದಿಗೊಳಿಸಲಾಗಿರುವ ಕನಿಷ್ಟ ಬೆಂಬಲೆ ಬೆಲೆ ರೂ.1815 ರಂತೆ ಭತ್ತವನ್ನು ಖರೀದಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243