ದಿನದ ಸುದ್ದಿ

ಅಂಬೇಡ್ಕರ್ ಕನಸು ನನಸು ಮಾಡುವ ಪ್ರಾಮಾಣಿಕ‌ ಪ್ರಯತ್ನ ಮಾಡಿದ್ದೇನೆ : ಸಿದ್ದರಾಮಯ್ಯ

Published

on

ಸುದ್ದಿದಿನ, ಬಾದಾಮಿ: ಮತ ಚಲಾವಣೆ ಒಂದರಿಂದಲೇ ಸಮಾನತೆ ತರಲು ಸಾಧ್ಯವಿಲ್ಲ ಎಂಬುದು ಅಂಬೇಡ್ಕರರಿಗೆ ತಿಳಿದಿತ್ತು. ಎಲ್ಲ ವರ್ಗದ-ಜಾತಿಯ ಜನರಿಗೆ ಸಮಾನ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ಅವಕಾಶ ದೊರೆಯಬೇಕು ಎಂಬುದು ಅವರ ಕನಸಾಗಿತ್ತು. ಆ ಕನಸನ್ನು ನನಸಾಗಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬಾದಾಮಿಯಲ್ಲಿ ಗುರುವಾರ ಆಯೋಜಿಸಿದ್ದ ಬಾಗಲಕೋಟೆ ಜಿಲ್ಲಾ ಮಟ್ಟದ ಗಂಗಾ ಮತಸ್ಥ ಅಂಬಿಗರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು 1994-95ಲ್ಲಿ‌ ನನ್ನ‌ ನೇತೃತ್ವದ ಉಪಸಮಿತಿ ವರದಿ ಆಧಾರದಲ್ಲಿಯೇ ಸ್ಥಳೀಯ ಸಂಸ್ಥೆಗಳಲ್ಲಿ‌ ಹಿಂದುಳಿದ ಜಾತಿಗಳಿಗೆ (ಬಿಸಿಎಂ-ಎ) 26.4% ಮತ್ತು ಮುಂದುವರಿದ‌ ಜಾತಿಗಳ (ಬಿಸಿಎಂ-ಬಿ) ಬಡವರಿಗೆ 6.6ರಷ್ಟು ರಾಜಕೀಯ ಮೀಸಲಾತಿ ಕಲ್ಪಿಸಲಾಯಿತು. ಇದರಿಂದಾಗಿ ಕೆಳಜಾತಿಗಳಲ್ಲಿ‌ ನಾಯಕತ್ವ ಬೆಳೆಯಿತು‌ ಎಂದರು.

ಸಮಾಜ ಚಲನ ರಹಿತವಾಗಿದೆ. ಸರ್ವರಿಗೂ ಉದ್ಯೋಗ, ಶಿಕ್ಷಣ, ಅಧಿಕಾರ, ಸಂಪತ್ತು ದೊರೆತಾಗ ಮಾತ್ರ ಸಮಾಜ ಚಲನಶೀಲವಾಗುತ್ತದೆ. ತನ್ಮೂಲಕ ಜಾತಿ ವ್ಯವಸ್ಥೆ ಕ್ರಮೇಣ ನಿರ್ಮೂಲನೆ ಹೊಂದಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆಡಳಿತ ವರ್ಗ ಮತ್ತು ಜನತೆ ಒಂದಾಗಿ ಶ್ರಮಿಸ ಬೇಕಾಗಿದೆ ಎಂದು ನುಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version