ದಿನದ ಸುದ್ದಿ
ಭತ್ತದ ನಾಟಿ ಮಾಡಿ ಸಂಭ್ರಮಿಸಿದ ಶಾಲಾ ಮಕ್ಕಳು
ಸುದ್ದಿದಿನ,ಭದ್ರಾವತಿ: ಸಮೀಪದ ಕಡದಕಟ್ಟೆ ನವಚೇತನ ಅನುದಾನಿತ ಕನ್ನಡ ಶಾಲೆಯ ಶಿಕ್ಷಕರಾದ ಸಿ.ಎಚ್.ನಾಗೇಂದ್ರಪ್ಪ ಮತ್ತು ಶಿಕ್ಷಕಿ ಕೆ.ಮಮತ ಯವರು 7ನೇ ತರಗತಿ ಕನ್ನಡ ಪಠ್ಯದಲ್ಲಿರುವ ಸೀನ ಸೆಟ್ಟರು ನಮ್ಮ ಟೀಚರ್ ಗದ್ಯದಲ್ಲಿ ಬರುವ ಭತ್ತದ ಸಸಿ ಕೀಳುವ ವಿಧಾನ ಮತ್ತು ನಾಟಿ ಮಾಡುವ ವಿಧಾನವನ್ನು ಶಾಲೆಯ ಪಕ್ಕದಲಿರುವ ಗದ್ದೆಗೆ ಮಕ್ಕಳನ್ನು ಕರೆದೊಯ್ದು,ಪ್ರಯೋಗಿಕವಾಗಿ ಭತ್ತದ ಸಸಿ ಕೀಳುವ ವಿಧಾನ ಮತ್ತು ನಾಟಿ ಮಾಡುವ ವಿಧಾನವನ್ನು ಹೇಳಿಕೊಟ್ಟರು. ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಬೆರೆತು ಶಿಕ್ಷಕರ ಮಾರ್ಗದರ್ಶನದೊಂದಿಗೆ ಭತ್ತದ ನಾಟಿ ಮಾಡಿ ಸಂಭ್ರಮಿಸಿದರು.