ದಿನದ ಸುದ್ದಿ
ಸೂಳೆಕೆರೆ ರಕ್ಷಣೆಗೆ ಸರ್ವಪ್ರಯತ್ನ : ತರಳಬಾಳು ಶ್ರೀ
ಸುದ್ದಿದಿನ ಡೆಸ್ಕ್ | ಏಷ್ಯಾದಲ್ಲಿಯೇ ಅತಿ ದೊಡ್ಡದಾದ ಕೆರೆ ಎಂಬ ಖ್ಯಾತಿಗೆ ಪಾತ್ರವಾದ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಯನ್ನು ಕಾನೂನು ಬದ್ಧವಾಗಿ ಉಳಿಸುವ ಸರ್ವ ಪ್ರಯತ್ನವನ್ನು ಮಾಡಬೇಕಾಗಿದೆ ಎಂದು ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.
ಸೂಳೆಕೆರೆ ಒತ್ತುವರಿ ತೆರವಿನ ವಿಚಾರದಿ ಚರ್ಚಿಸಲು ತರಳಬಾಳು ಸದ್ದರ್ಮ ನ್ಯಾಯಪೀಠದಕ್ಕೆ 3 ನೇ ಬಾರಿ ಭೇಟಿ ನೀಡಿದ್ದ ಖಡ್ಗ ಸ್ವಯಂ ಸೇವಾ ಸಂಘದ ಪದಾಧಿಕಾರಿಗಳೊಂದಿಗೆ ಶ್ರೀಗಳು ಮಾತನಾಡಿದರು. ದೂರವಾಣಿ ಮೂಲಕ ಶಿವಮೊಗ್ಗ ನೀರಾವರಿ ಇಲಾಖೆಯ ಮುಖ್ಯಸ್ಥರನ್ನು ಸಂಪರ್ಕಿಸಿದ ಶ್ರೀಗಳು ,ಸೂಳೆಕೆರೆಯ ವಿಸ್ತೀರ್ಣ 5447 ಎಕರೆ. 24 ಕೋಡಿಯನ್ನು 28 ಅಡಿಗೆ ಹೆಚ್ಚಿಸಿದ್ದರಿಂದ ಸಾವಿರಾರು ಎಕರೆ ಜಮೀನು ಮುಳುಗಡೆಯಾಗಿದೆ . ಭೂ ಮಾಲೀಕರಿಗೆ ಪರಿಹಾರವನ್ನೂ ವಿತರಿಸಲಾಗಿದೆ.ಆದರೆ ಕಂದಾಯ ಇಲಾಖೆಯಿಂದ ನೀರಾವರಿ ಇಲಾಖೆಗೆ ಈ ಜಮೀನನ್ನು ಹಸ್ತಾಂತರಿಸಿಲ್ಲ .ಒಂದು ಸಾವಿರಕ್ಕೂ ಅಧಿಕ ಎಕರೆ ಜಮೀನುನ್ನೂ ನೀರಾವರಿ ಇಲಾಖೆ ಸುಪರ್ದಿಗೆ ತಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಕೆರೆ ಸರ್ವೆ ಕಾರ್ಯಕ್ಕೆ ಭೂಮಾಪಕರ ಪಟ್ಟಿ ನೀಡಿದ ಶ್ರೀಗಳು ಇವರಲ್ಲಿ ಸೂಕ್ತವಾದವರನ್ನು ಆಯ್ಕೆ ಮಾಡಿಕೊಂಡು ಅಳತೆ ಮಾಡಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ಕೆರೆಯನ್ನು ಅಳತೆ ಮಾಡಿದ ನಂತರ ಅದರ ಸುತ್ತಲೂ 5 ಅಡಿ ಆಳ ಮತ್ತು 5 ಅಡಿ ಅಗಲದ ಗುಂಡಿಯನ್ನು ತೆಗೆಯುವಂತೆ ಇದರ ಖರ್ಚಿಗೆ ಬೇಕಾದ ಹಣವನ್ನು ಸಂಬಂಧಿಸಿದ ಇಲಾಖೆಯಿಂದ ಬಿಡುಗಡೆ ಮಾಡಿಸುವಂತೆ ಚನ್ನಗಿರಿ ಕ್ಷೇತ್ರದ ಶಾಸಕರಾದ ಮಾಡಾಳು ವಿರೂಪಾಕ್ಷಪ್ಪನವರಿಗೆ ದೂರವಾಣಿ ಮೂಲಕ ತಿಳಿಸಿದರು.
ಖಡ್ಗ ಸ್ವಯಂ ಸೇವಾ ಸಂಘದ ರಾಜ್ಯಾಧ್ಯಕ್ಷ ಬಿ.ಆರ್ ರಘು ,ಪ್ರಧಾನ ಕಾರ್ಯದರ್ಶಿ ಟಿ.ಕುಬೇಂದ್ರಸ್ವಾಮಿ, ನಿರ್ದೇಶಕರಾದ ಚಂದ್ರಹಾಸ್ ,ವೀರಭದ್ರಪ್ನ ವೀರಭದ್ರಪ್ಪ, ರವಿಕುಮಾರ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401