ದಿನದ ಸುದ್ದಿ

ಮಂಡ್ಯ : ಮೇ 29 ರಂದು ಸುಮಲತಾ ಕೃತಜ್ಞತಾ ಸಮಾವೇಶ

Published

on

ಸುದ್ದಿದಿನ, ಮಂಡ್ಯ : 29ರಂದು ಸುಮಲತಾ ಕೃತಜ್ಞತಾ ಸಮಾವೇಶ. ಮಂಡ್ಯದಲ್ಲೇ ಅಂಬಿ ಹುಟ್ಟು ಹಬ್ಬ ಆಚರಿಸುತ್ತಿದ್ದು, ಅಂದೇ ಸುಮಲತಾ ಅವರು ಕೃತಜ್ಞತಾ ಸಮಾವೇಶ ವನ್ನ ಹಮ್ಮಿಕೊಂಡಿದ್ದಾರೆ ಎಂದು ಸುಮಲತಾ ಬೆಂಬಲಿಗ, ಕೆಪಿಸಿಸಿ ಮಾಜಿ ಸದಸ್ಯ‌ ಇಂಡುವಾಳು ಎಸ್. ಸಚ್ಚಿದಾನಂದ ಹೇಳಿದ್ದಾರೆ.

ನಂತರ ಮಾತನಾಡಿದ ಅವರು,ಸಮಾವೇಶದಲ್ಲಿ ದರ್ಶನ್, ಯಶ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ಅಭಿಷೇಕ್ ಭಾಗಿಯಾಗಲಿದ್ದು, ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಕೃತಜ್ಞತ ಸಭೆ ನಡೆಯಲಿದೆ. ಸಭೆಗೂ ಮುನ್ನ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹಾಗೇ ಅಂಬಿ ಹುಟ್ಟೂರು ದೊಡ್ಡರಸಿನಕೆರೆಗೆ ಭೇಟಿ ನೀಡಿ ಬಳಿಕ ಕೃತಜ್ಞತೆ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸಹಸ್ರಾರು ಸಂಖ್ಯೆಯಲ್ಲಿ ಸ್ವಾಭಿಮಾನಿ ಪಡೆ ಭಾಗಿಯಾಗುವ ಸಾಧ್ಯತೆಯಿದೆ. ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕಾರ ಬಳಿಕ ಕ್ಷೇತ್ರ ಪ್ರವಾಸ ಮಾಡಲಿದ್ದಾರೆ.ಕಾವೇರಿಗಾಗಿಯೇ ಅಂಬರೀಶ್ ರಾಜೀನಾಮೆ ಕೊಟ್ಟವರು. ಅವರ ಪತ್ನಿಯಾಗಿ ಸುಮಲತಾ ಅವರು ಕಾವೇರಿ ಪರ ಇರುತ್ತಾರೆ. ಹಾಗೂ ಅವರು ಮಂಡ್ಯ ಅಭಿವೃದ್ಧಿ, ರೈತರ ಪರ ದರ್ಶನ್, ಯಶ್ ಕೂಡ ಅದೇ ಹೇಳಿದ್ದಾರೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version