ರಾಜಕೀಯ

ಚುನಾವಣೆಗಾಗಿ ಸುಮಲತ ಪೋಟೋಶೂಟ್ ..!

Published

on

ಸುದ್ದಿದಿನ, ಬೆಂಗಳೂರು : ಸುಮಲತ ಅಂಬರೀಶ್ ಮಂಡ್ಯ ಲೋಕಸಭಾ ಚುನಾವಣೆಗೆ ಸ್ಪರ್ದಿಸುವುದು ಬಹುತೇಕ ಖಚಿತವಾಗಿದೆ. ಮಂಡ್ಯದ ಅಭಿಮಾನಿಗಳ ಒತ್ತಾಯದ ಮೇರೆಗೆ ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ್ದರಾದರೂ ಕಾಂಗ್ರೆಸ್ ಸುಮಲತ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದಿದೆ.

ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕಣಕ್ಕೆ ಧುಮುಕಿದ್ದಾರೆ. ಈ ನಡುವೆ ಮಂಡ್ಯದ ಗುಪ್ತಚರ ಮಾಹಿತಿಯ ಪ್ರಕಾರ ನಿಖಿಲ್ ಗೆ ಸೋಲು ಖಚಿತ ಎಂದು ಹೇಳಲಾಗಿದೆ.‌ಇತ್ತ ಅಂಬರೀಶ್ ಅಭಿಮಾನಿಗಳು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ. ಹಾಗೇ ಮಂಡ್ಯದ ಮತದಾರ ಸುಮಲತ ಗೆ ಚುನಾವಣೆ ಬೇಕಾ? ಎಂಬ ಪ್ರಶ್ನೆಯನ್ನಿಟ್ಟಿದ್ದಾರೆ.

ಈ ಎಲ್ಲಾ ವಿದ್ಯಾಮಾನಗಳ ನಡುವೆ ಸುಮಲತ ಚುನಾವಣೆಗಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಚುನಾವಣೆಗೆ ಸಖಲಸಿದ್ದತೆ ಮಾಡಿಕೊಂಡಿರುವ ಸುಮಲತ ಅಂಬಿ ಅಭಿಮಾನಿಗಳ ಆಸೆಯಂತೆ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾದಂತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version