ದಿನದ ಸುದ್ದಿ
‘ಆಣೂರು ಕೆರೆ’ ತುಂಬಿಸುವ ಯೋಜನೆಗೆ ತರಳಬಾಳು ಶ್ರೀ ಸಾರಥ್ಯ
ಸುದ್ದಿದಿನ ಡೆಸ್ಕ್ : ಬರದ ನಾಡಿಗೆ ಭದ್ರೆ ಹರಿಸಿದ ಭಗೀರಥಸ್ವರೂಪಿ,ಚನ್ನಗಿರಿ,ತರೀಕೆರೆ,ಜಗಳೂರು,ಚಿತ್ರದುರ್ಗ, ದಾವಣಗೆರೆ ಮುಂತಾದ ಜಿಲ್ಲೆಗಳ ನೂರಾರು ಕೆರೆಗಳಿಗೆ ಪಾವನಗಂಗೆ ಉಣಿಸಿ, ಒಣಗಿ ನಿಂತಿದ್ದ ಸಾವಿರಾರೂ ಎಕರೆ ತೋಟಗಳನ್ನು ಉಳಿಸಿ, ಜನ-ಜಾನುವಾರು ಜೀವನದ ಸಂಕಷ್ಟಗಳಿಗೆ ಉದಾತ್ತ ಸಂಕಲ್ಪದ ಮೂಲಕ ಪರಿಹಾರ ನೀಡಿದ ಭರತಭೂಮಿಯ ಜಲಋಷಿ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಆಣೂರು ಗ್ರಾಮದ ಶಿಷ್ಯ ಸಮಾಜದ ಬಿನ್ನಹವನ್ನು ಮನ್ನಿಸಿ ಅಲ್ಲಿನ ಕೆರೆ ತುಂಬಿಸುವ ಹೋರಾಟದ ಯೋಜನೆಗೆ ಬೆಂಬಲದ ಹಸಿರು ನಿಶಾನೆ ತೋರಿದರು.
ಬಹು ದಿನಗಳಿಂದ ಕೆರೆ ತುಂಬಿಸುವ ಹೋರಾಟಕ್ಕೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ತಮ್ಮ ಅಳಲು ತೋಡಿಕೊಂಡ ಸಮಿತಿಯವರು ಸದ್ದರ್ಮ ನ್ಯಾಯಪೀಠಕ್ಕೆ ಅಹವಾಲು ಸಲ್ಲಿಸಿದ್ದರು. ಮನವಿ ಅರಿತು ವಿಷಯದ ಕುರಿತು ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿದ ಶ್ರೀಗಳು ಡಿಟೇಲ್ ಪ್ರಾಜೆಕ್ಟ್ ರಿಪೋರ್ಟ್( DPR ).ಆಗಿರುವುದಿಲ್ಲ ಎಂಬುದು ತಿಳಿದು ಬಂದಿದ್ದು,ರೈತರ ಹೋರಾಟ ನಿಲ್ಲಿಸುವುದು ಬೇಡ ನಿಮ್ಮ ಹೋರಾಟ ನಿರಂತರವಾಗಿರಲಿ ನಿಮ್ಮ ಹೋರಾಟದ ಬೆಂಗಾವಲಾಗಿ ನಾವು ಇದ್ದು, ಸಂಬಂಧಪಟ್ಟ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಯೋಜನೆಯನ್ನು ರೂಪಿಸಿ ಪರಿಹಾರ ಕಂಡುಕೊಳ್ಳವ ಕುರಿತು ಕಾರ್ಯಕ್ರಮ ರೂಪಿಸಲಾಗುವುದಾಗಿ ಶ್ರೀಜಗದ್ಗುರುವರ್ಯರು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401