ದಿನದ ಸುದ್ದಿ
ನೇಪಾಳದ ವಿಶ್ವ ಶಾಂತಿ ಸಮ್ಮೇಳನ : ಭಾರತವನ್ನು ಪ್ರತಿನಿಧಿಸಲಿರುವ ತರಳಬಾಳು ಶ್ರೀಗಳು
ಭರತಖಂಡದ ಶ್ರೇಷ್ಠ ವಿದ್ವಾಂಸರಲ್ಲಿ ಆಗ್ರಗಣ್ಯರದ ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರಿಗೆ ಅಂತರರಾಷ್ಟ್ರೀಯ ಶಾಂತಿ ಪ್ರತಿಷ್ಠಾನದ ಆಹ್ವಾನದ ಮೇರೆಗೆ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ನ.30 ರಿಂದ ಡಿ.3 ರವರೆಗೆ ನಡೆಯಲಿರುವ ಏಷ್ಯಾ ಶಾಂತಿ ಶೃಂಗ ಸಭೆಯಲ್ಲಿ ಗುರುವರ್ಯರು ” ನಮ್ಮ ಕಾಲದ ಪ್ರಚಲಿತ ಸವಾಲುಗಳು,ಅಭಿವೃದ್ಧಿ & ಸಾರ್ವಕಾಲಿಕ ಮೌಲ್ಯಗಳ “ಕುರಿತು ವಿಷಯ ಮಂಡಿಸುವರು.
ಭಾರತದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕೂಡ ಭಾಗವಹಿಸಲಿದ್ದಾರೆ.ಕಳೆದ ಹಲವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಶ್ರೀ ಗಳು ತಮ್ಮ ವಿದ್ವತ್ಪೂರ್ಣ ಜ್ಞಾನ ಪ್ರಭೆಯನ್ನು ಜಗತ್ತಿನ ವಿದ್ವಾಂಸರ ಸಮ್ಮುಖದಿ ಭಾರತದ ಭವ್ಯ ಪರಂಪರೆಯ ವಿಶ್ವರೂಪ ದರ್ಶನ ಮಾಡಿರುವುದು ಭಾರತೀಯರೆಲ್ಲರು ಹೆಮ್ಮೆ ಪಡುವಂತಹದು.
ನೇಪಾಳದ ಶಾಂತಿ ಶೃಂಗ ಸಮ್ಮೇಳನಕ್ಕೆ ತರಳಬಾಳು ಶ್ರೀ ಜಗದ್ಗುರುವರ್ಯರು.ನಮ್ಮ ಕಾಲದಲ್ಲಿ ಪ್ರಚಲಿತ ಸವಾಲುಗಳು ಅಭಿವೃದ್ಧಿ ಮತ್ತು ಸಾರ್ವಜನಿಕ ಮೌಲ್ಯಗಳು ಕುರಿತು ಶ್ರೀ ಜಗದ್ಗುರುವರ್ಯರಿಂದ ವಿಷಯ ಮಂಡನೆ.ಶ್ರೀ ಜಗದ್ಗುರುವರ್ಯರ ಜೊತೆ ಮಾಜಿ ರಾಷ್ಟ್ರಪತಿ ಶ್ರೀ ಪ್ರಣವ್ ಮುಖರ್ಜಿ ಭಾಗಿ.
ದಶಕಗಳ ಹಿಂದೆಯೇ ಅಮೇರಿಕಾದ ಸಂಸ್ಥೆಯಿಂದ ವಿಶ್ವ ಶಾಂತಿಧೂತ ಪ್ರಶಸ್ತಿ ಪುರಸ್ಕೃತರಾಗಿವ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳವರುನವಂಬರ್ 30 ರಿಂದ ಡಿಸೆಂಬರ್ 3 ರವರೆಗೆ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಜರುಗಲಿರುವ ಶಾಂತಿ ಶೃಂಗ ಸಮ್ಮೇಳನ.
ಗುರುವರ್ಯರು ಸಕಲ ಭಾಷೆ ವಿದ್ವಾಂಸರಾಗಿದರು ಸಹ ಮಾತೃಭಾಷೆಯ ಮೇಲಿನ ಅವರ ಪ್ರೇಮ ಅನನ್ಯ..
ಅಂತರರಾಷ್ಟ್ರೀಯ ವೇದಿಕೆಗಳಲ್ಲಿ
ಕನ್ನಡದಲ್ಲಿ ಸಹಿಮಾಡುವ ಮುಖೇನ ಕರುನಾಡ ತಾಯಿ ಭುವನೇಶ್ವರಿ ಯ ಹೆಮ್ಮೆಯ ಪುತ್ರ ರತ್ನರೆನಿಸಿದ್ದಾರೆ.
ಭಾರತ್ ಮಾತಾಕ್ಕಿ ಜೈ…
ಜೈ ಕರ್ನಾಟಕ