ದಿನದ ಸುದ್ದಿ
2020ಬಿಲಿಯನ್ ಮಾರ್ಕೆಟಿಂಗ್ ಕಂಪನಿಯಲ್ಲಿ ಹೂಡಿಕೆದಾರರಿಗೆ ಮೋಸ : ಸಿಐಡಿ, ಸಿಐಯು ಘಟಕ್ಕೆ ದೂರು ನೀಡಿ
ಸುದ್ದಿದಿನ,ದಾವಣಗೆರೆ : 2020ಬಿಲಿಯನ್ ಮಾರ್ಕೆಟಿಂಗ್ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗಿರುವ ಹೂಡಿಕೆದಾರರು ಸೂಕ್ತ ದಾಖಲೆಗಳೊಂದಿಗೆ ಪೊಲೀಸ್ ನಿರೀಕ್ಷಕರು/ತನಿಖಾಧಿಕಾರಿ ಸಿಐಡಿ, ಸಿಐಯು ಘಟಕ ದಾವಣಗೆರೆ ಇವರಿಗೆ ದೂರು ನೀಡಬೇಕು.
www.2020billion.com ಬಿಲಿಯನ್ ಮಾರ್ಕೆಟಿಂಗ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗಿರುವ ಬಗ್ಗೆ ದಾವಣಗೆರೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಐಪಿಸಿ ರೀತ್ಯಾ ಕಂಪನಿಯ ಸ್ಥಾಪಕರಾದ ತಮಿಳುನಾಡಿನ ಮದುರೈ ವಾಸಿಗಳಾದ ಸೈಯ್ಯದ್ ಇಬ್ರಾಹಿಂ ತಂದೆ ಲೇಟ್ ಆಜಾದ್ 46 ವರ್ಷ, ಮಮ್ತಾಜ್ ಕೋಂ ಸೈಯ್ಯದ್ ಇಬ್ರಾಹಿಂ ಹಾಗೂ ಎಂ.ಆರ್ ರಾಜ ತಂದೆ ಎಂ.ವಿ ರೆಡ್ಡಪ್ಪ 39 ವರ್ಷ ಮುದುವಾಡಿ ಗ್ರಾಮ ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ ಇವರುಗಳ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ಮುಂದಿನ ತನಿಖೆಯನ್ನು ಸಿಐಡಿ, ಸಿಐಯು ದಾವಣಗೆರೆ ಘಟಕಕ್ಕೆ ವರ್ಗಾಯಿಸಿದ್ದು, ಪೊಲೀಸ್ ಅಧೀಕ್ಷಕರು, ಆರ್ಥಿಕ ಅಪರಾಧಗಳು, ಸಿಐಡಿ ಬೆಂಗಳೂರು ಇವರು 2020ಬಿಲಿಯನ್ ಮಾರ್ಕೆಟಿಂಗ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗಿರುವ ಹೂಡಿಕೆದಾರರು ಸೂಕ್ತ ದಾಖಲಾತಿಯೊಂದಿಗೆ ಪೊಲೀಸ್ ನಿರೀಕ್ಷಕರು/ತನಿಖಾಧಿಕಾರಿ ಸಿಐಡಿ, ಸಿಐಯು, ರೈರ ಭವನ, ಹಳೇ ಜಿಲ್ಲಾಧಿಕಾರಿಗಳ ಕಚೇರಿ ರೂ.ನಂ:31, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು, ದಾವಣಗೆರೆ-577002 ಈ ವಿಳಾಸಕ್ಕೆ ಭೇಟಿ ನೀಡಿ ದೂರು ನೀಡಬೇಕೆಂದು ಸಿ.ಐ.ಡಿ, ಸಿ.ಐ.ಯು ಘಟಕದ ಪೊಲೀಸ್ ನಿರೀಕ್ಷಕರಾದ ಸಿದ್ದೇಗೌಡ ಹೆಚ್.ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.