/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ರಾಜಕೀಯ

ಯಡಿಯೂರಪ್ಪ ಶೋಭಕ್ಕನ ಜೊತೆ ಮಾಟ ಮಂತ್ರ ಮಾಡಿಸಲು ಕೇರಳಕ್ಕೆ ಹೋಗಿದ್ದಾರೆ : ಗೋಪಾಲಕೃಷ್ಣ ಬೇಳೂರು ಕಿಡಿ

Published

on

ಸುದ್ದಿದಿನ,ಶಿವಮೊಗ್ಗ: ಬಿಎಸ್ ವೈ ವಿರುದ್ಧ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರ್ ಅವರು ವಾಗ್ದಾಳಿ ನಡೆಸಿ ರೈತರಿಗೆ ಮರಣ ಶಾಸನ ತಂದ ಯಡಿಯೂರಪ್ಪಗೆ ರೈತರ ಬಗ್ಗೆ ಮಾತಾಡುವ ಹಕ್ಕಿಲ್ಲ.‌ನಾಚಿಗೆ ಆಗೋದಿಲ್ವೇ ಯಡಿಯೂರಪ್ಪನವರೇ. ಸುಳ್ಳು ಹೇಳೋದ್ರಲ್ಲಿ ಅಪ್ಪ ಮಕ್ಕಳು ಮೂರೂ ಬಹುಮಾನ ಹೊಡೀತಾರೆ‌ ಎಂದರು.

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯ ನಾಥ್ ಗೆ ಹುಚ್ಚು ನಾಯಿ ಕಡಿದಿರಬೇಕು. ಆಂಜನೇಯ ದೇವರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪ ಮತ್ತು ಮಕ್ಕಳ ಜಾತಕ ನನ್ನ ಹತ್ರ ಇದೆ ಬರಲಿ ನನ್ನ ಹತ್ರ ನೋಡೋಣ‌ ಎಂದ ಅವರು ಯಡಿಯೂರಪ್ಪ ಅವರೇ ರೈತರ ಶಾಲು ನೀವು ಹಾಕಿಕೊಳ್ಳಬೇಡಿ.
ಶಿವಮೊಗ್ಗದ ಬಿಎಸ್ ವೈ ಮನೆಗೆ 3ನೇ ತಾರೀಕು ಮುತ್ತಿಗೆ ಹಾಕಲಿದ್ದು ಕೇಂದ್ರದ ಬೆಲೆ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ಮಾಡಲಾಗುವುದು ಎಂದರು.

ಈ ವೇಳೆ ಬೇಳೂರ್ ಹೊಸ ಬಾಂಬ್ ವೊಂದನ್ನು ಸಿಡಿಸಿದ್ದಾರೆ, ಚಿಕಿತ್ಸೆ ಪಡೆಯಲು ಬಿಎಸ್ ವೈ ಕೇರಳಕ್ಕೆ ಹೋಗಿಲ್ಲ. ಮಂತ್ರ ತಂತ್ರ ಮಾಡಲು ಕೇರಳಕ್ಕೆ ಹೋಗಿದ್ದಾರೆ. ಶೋಭಕ್ಕನೂ ಜೊತೆಗೆ ಹೋಗಿದ್ದಾರೆ, ಸತ್ಯಾವಾಗಿಯೂ ಹೇಳ್ತೀನಿ. ಚಿಕಿತ್ಸೆಗಂತೂ ಯಡಿಯೂರಪ್ಪ ಕೇರಳಕ್ಕೆ ಹೋಗಿಲ್ಲ. ಮಾಟ, ಮಂತ್ರದಿಂದ ಸರಕಾರ ಬೀಳಿಸಲು ಸಾಧ್ಯವಿಲ್ಲ‌ ಎಂದು ಕಿಡಿಕಾರಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version