ದಿನದ ಸುದ್ದಿ
ಎತ್ತಿನ ಹೊಳೆ ಯೋಜನೆ ಮತ್ತು ರಾಜಕಾರಣಿಗಳ ನಿರ್ಲಕ್ಷ : ಸಿ.ಎಸ್. ದ್ವಾರಕಾನಾಥ್
ಇಂದು ನಮ್ಮ ಕಣ್ಣ ಮುಂದಿರುವ ಅಪರೂಪದ ನೀರಾವರಿ ತಜ್ಞ ಪ್ರೊ.ನರಸಿಂಹಪ್ಪ ನವರನ್ನು ನಿನ್ನೆ ಬೆಟ್ಟಿ ಮಾಡಿದ್ದೆ. ನಮ್ಮ ಚಿಕ್ಕಬಳ್ಳಾಪುರ ಕ್ಷೇತ್ರದ ನೀರಿನ ಸಮಸ್ಯೆ ಕುರಿತಂತೆ ಚರ್ಚೆ ಮಾಡಿದೆ.
ಎತ್ತಿನ ಹೊಳೆ ಯೋಜನೆಯ ಆಗುಹೋಗುಗಳನ್ನು ಅವರು ಹೇಳುತ್ತಾ ಹೋದಂತೆ ಸತ್ಯ ನನ್ನ ಮುಂದೆ ಅನಾವರಣಗೊಳ್ಳತೊಡಗಿತು!? ನಮ್ಮ ರಾಜಕಾರಣಿಗಳು ಹೇಳುವ ಸುಳ್ಳುಗಳು ಕಣ್ಣಿಗೆ ರಾಚತೊಡಗಿದವು!?
260 ಕಿ.ಮೀ.ಪೈಪ್ ಲೈನ್ ಹಾಕಬೇಕಿದ್ದು ಈವರೆಗೆ ಕೇವಲ 37 ಕಿ.ಮೀ.ಮಾತ್ರ ಹಾಕಲಾಗಿದೆ! ಹಾಕಿರುವ ಮೂರೂ ಬೃಹತ್ ಪಂಪುಗಳು ಕಿಲುಬು ಹಿಡಿಯುತ್ತಿವೆ! ಸಾವಿರಾರು ಕೋಟಿ ಜನರ ಹಣ ನೀರಿನಂತೆ ಹರಿದು ಕಂಟ್ರಾಕ್ಟರುಗಳ, ರಾಜಕಾರಣಿಗಳ ಮನೆ ತುಂಬಿದೆ..!!
ಇನ್ನೂ ಅನೇಕ ವಿವರಗಳನ್ನು ನೀಡತೊಡಗಿದರು… “ಮನುಷ್ಯನಿಗೆ ಕುಡಿಯಲು ನೀರು ಕೊಡಲಾರದಂತಹ ನಾಯಕತ್ವ ಯಾರಿಗೆ ಬೇಕು.. ಮೊಯ್ಲಿ ಸುಳ್ಳು ಹೇಳಿದರೆ, ಬಚ್ಚೇಗೌಡರಿಗೆ ಈ ಬಗ್ಗೆ ಕನಿಷ್ಠ ಕಾಳಜಿ ಇಲ್ಲ… ಈ ಇಬ್ಬರ ನಡುವೆ ನೀನಿದ್ದೀಯ.. ಹಣವಿಲ್ಲದ ನಿನ್ನನ್ನು ಗೆಲ್ಲಲು ಬಿಡುತ್ತಾರೆಯೇ..? ಅಕಸ್ಮಿಕವಾಗಿ ನೀನು ಗೆದ್ದರೆ ನಮ್ಮ ಜನಕ್ಕೆ ನೀರು ಸಿಗಲು ಕನಿಷ್ಠ ಪ್ರಾಮಾಣಿಕವಾಗಿ ಹೋರಾಡಬಲ್ಲೆ ಎಂಬ ನಂಬಿಕೆ ನನಗಿದೆ.. ನಿನಗೆ ಒಳ್ಳೆಯದಾಗಲಿ..” ಎಂದು ಹರಸಿ ಕಳಿಸಿದರು.
– ಸಿ.ಎಸ್.ದ್ವಾರಕಾನಾಥ್
ಸುದ್ದಿದಿನ.ಕಾಂ|ವಾಟ್ಸಾಪ್|9986715401