ದಿನದ ಸುದ್ದಿ
ಜಗಳೂರು ತಾಲ್ಲೂಕಿಗೆ ಇಂದು ಎಸಿಬಿ ಭೇಟಿ
ಸುದ್ದಿದಿನ,ದಾವಣಗೆರೆ : ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ, ದಾವಣಗೆರೆ ಅಧಿಕಾರಿಗಳು ಮಾ.19 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 02 ಗಂಟೆವರೆಗೆ ಜಗಳೂರು ತಾಲ್ಲೂಕಿನ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಕುಂದು ಕೊರತೆಗಳ ಅರ್ಜಿಗಳನ್ನು ಸ್ವೀಕರಿಸುವರು.
ಇದನ್ನೂ ಓದಿ | ಹೊನ್ನಾಳಿ | ಬೈಕ್ ಅಪಘಾತದಲ್ಲಿ ಪಿಡಿಒ ಸಾವು
ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಅರ್ಜಿಗಳನ್ನು ನೀಡಿ ಈ ಭೇಟಿಯ ಸದುಪಯೋಗ ಪಡೆಯಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08192-236600, 9480997575 ನ್ನು ಸಂಪರ್ಕಿಸಬಹುದೆಂದು ಎಸಿಬಿ ಡಿವೈಎಸ್‍ಪಿ ಸುಧೀರ್.ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243