ದಿನದ ಸುದ್ದಿ
ಹರಿಹರ | ಅಪಘಾತ; ಯುವಕ ಸ್ಥಳದಲ್ಲಿಯೇ ಸಾವು
ಸುದ್ದಿದಿನ,ದಾವಣಗೆರೆ: ಪಾದಚಾರಿ ಯುವಕನ ಮೇಲೆ ಬುಲೆರೋ ವಾಹನ ಹರಿದು ಯುವಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಹರಿಹರದ ಶ್ರೀಕಾಂತ ಟಾಕೀಸ್ ಮುಂಭಾಗ ನಡೆದಿದೆ.
ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ನವೀನ್ (20) ಎಂಬಾತ ಮೃತಪಟ್ಟ ಯುವಕ. ಇಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಬುಲೆರೋ ವಾಹನ ಪಾದಚಾರಿ ಮೃತ ನವೀನ್ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಬಗ್ಗೆ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243