ದಿನದ ಸುದ್ದಿ

ಬ್ರೇಕ್ ಫೇಲ್ ಅಲ್ಲ, ಚಾಲಕ ಕುಡಿದ ಅಮಲಿನಿಂದಾದ ಅಪಘಾತ

Published

on

ಸುದ್ದಿದಿನ,ಮಂಡ್ಯ : ನಗರದಲ್ಲಿ ನೆನ್ನೆ ರಾತ್ರಿ ಅಪಘಾತಕ್ಕೀಡಾದ ಲಾರಿಯ ಬ್ರೇಕ್ ಫೇಲ್ ಆಗಿರಲಿಲ್ಲ, ಬದಲಿಗೆ ಮದ್ಯ ಸೇವನೆಯ ಅಮಲಿನಲ್ಲಿದ್ದ ಚಾಲಕನ ಅಜಾಗರೂಕತೆಯೇ ಕಾರಣ ಎಂಬುದನ್ನು ಪೊಲೀಸರು ಖಚಿತಪಡಿಸಿದ್ದಾರೆ.

ಅಪಘಾತ ಸಂಭವಿಸಿದಾಗ ಲಾರಿಯ ಬ್ರೇಕ್ ಫೇಲ್ ಆಗಿತ್ತು ಎನ್ನುವ ಸುದ್ದಿ ಹಬ್ಬಿತ್ತು. ಲಾರಿ ಅಡ್ಡಾದಿಡ್ಡಿ ಚಲಿಸಿ ಅಪಘಾತಕ್ಕೀಡಾದಾಗ ಲಾರಿಯ ಪವರ್ ಬ್ರೇಕ್ ಲಾಕ್ ಆಗಿತ್ತು. ಅದನ್ನು ತೆರವುಗೊಳಿಸಿ ವಾಹನವನ್ನು ತೆರವು ಮಾಡಲಾಗಿದೆ ಎಂದು ಸಂಚಾರಿ ಪಿ.ಎಸ್.ಐ. ನಿರಂಜನ್ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಲಾರಿಯ ಚಾಲಕ ಮದ್ಯಪಾನ ಮಾಡಿದ್ದು ಪರೀಕ್ಷೆಯಿಂದ ಖಚಿತವಾಗಿದೆ. ಆದರೆ, ಕೋರ್ಟ್ ಸಾಕ್ಷ್ಯಾಧಾರ ಒದಗಿಸುವ ದೃಷ್ಟಿಯಿಂದ ಚಾಲಕನವರಕ್ತ ಮಾದರಿ ಸಂಗ್ರಹಿಸಿ ಎಫ್.ಎಸ್.ಎಲ್. ಪರೀಕ್ಷೆಗೆ ಕಳುಹಿಸಲಾಗಿದೆ. ಲಾರಿಯ ಐಎಂವಿ ತಪಾಸಣೆಯು ಗುರುವಾರ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version