ಸಿನಿ ಸುದ್ದಿ
ನಟ ದರ್ಶನ್ ನಾಳೆ ಡಿಸ್ಚಾರ್ಜ್ ಸಾಧ್ಯತೆ; ದೇವರಾಜ್, ಪ್ರಜ್ವಲ್ ಸಂಜೆಗೆ ಡಿಸ್ಚಾರ್ಜ್
ಸುದ್ದಿದಿನ ದಾವಣಗೆರೆ: ಮೈಸೂರಿನಲ್ಲಿ ಕಾರ್ ಅಪಘಾತದಲ್ಲಿ ಗಾಯಗೊಂಡು ಕೊಲಂಬಿಯಾ ಆಸ್ಪತ್ರೆಗೆ ದಾಖಲಾಗಿದ್ದ ಸ್ಯಾಂಡಲ್‍ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಇನ್ನು ಒಂದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.
ಯಜಮಾನ ಚಿತ್ರದ ಚಿತ್ರಿಕರಣಕ್ಕಾಗಿ ಹೋಗುವ ವೇಳೆ ಮೈಸೂರು ಬಳಿ ನಟ ದರ್ಶನ್ ಕಾರ್ ಅಪಘಾತವಾಗಿತ್ತು. ಈ ವೇಳೆ ದರ್ಶನ್ ಕೈಗೆ ಬಲವಾಗಿ ಪೆಟ್ಟು ಬಿದ್ದಿತ್ತು. ಕೂಡಲೇ ಅವರನ್ನು ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದನ್ನು ಓದಿ: ದುನಿಯಾ ವಿಜಿ ‘ಖೈದಿ ನಂಬರ್ 9035’ ಈಗ ದರ್ಶನ್ ಗುಣಮುಖರಾಗುತ್ತಿದ್ದು, ಇನ್ನು ಒಂದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅಲ್ಲಿಯೇ ಇರಲಿದ್ದಾರೆ.
ದರ್ಶನ್ ಜತೆಗೆ ಗಾಯಗೊಂಡು ಆಸ್ಪತ್ರೆಯಲ್ಲಿ ನಟ ದೇವರಾಜ್, ಪ್ರಜ್ವಲ್, ಅಂತೋನಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಜೆ ವೇಳೆಗೆ ನಟ ದೇವರಾಜ್, ಪ್ರಜ್ವಲ್ ಡಿಸ್ಚಾರ್ಜ್ ಆಗಲಿದ್ದಾರೆ. ಆದರೆ, ದರ್ಶನ್ ಇನ್ನು ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.