ಸಿನಿ ಸುದ್ದಿ

ನಟ ದಿಗಂತ್‌’ಗೆ ಸಣ್ಣ ಗಾಯವಾಗಿದೆ ಅಷ್ಟೇ : ತಂದೆ ಕೃಷ್ಣಮೂರ್ತಿ ಸ್ಪಷ್ಟನೆ

Published

on

ಸುದ್ದಿದಿನ,ಬೆಂಗಳೂರು: ಕುತ್ತಿಗೆ ಭಾಗಕ್ಕೆ ಬಲವಾದ ಏಟಾಗಿಲ್ಲ. ಸಣ್ಣ ಒಳಪಡೆಟ್ಟುಗಳಾಗಿವೆ. ಆತಂಕ ಪಡುವ ಅಗತ್ಯವಿಲ್ಲ ಎಂದು ನಟ ದಿಗಂತ್ ತಂದೆ ಕೃಷ್ಣಮೂರ್ತಿ ಹೇಳಿದ್ದಾರೆ.

ಇಂದು ಮಣಿಪಾಲ್ ಆಸ್ಪತ್ರೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿಗಂತ್‌ಗೆ ಚಿಕಿತ್ಸೆ ನೀಡುವ ವೈದ್ಯರೊಂದಿಗೆ ನಾನು ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಈಗಷ್ಟೇ ದಿಗಂತ್ ಜೊತೆಯೂ ಮಾತನಾಡಿದ್ದೇನೆ. ಯಾವುದೇ ಗಂಭೀರ ಪ್ರಮಾಣದ ಗಾಯಗಳಾಗಿಲ್ಲ. ಸಣ್ಣ ಒಳ ಗಾಯಗಳು ಆಗಿವೆ. ವೈದ್ಯರು ಶಸ್ತ್ರಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ ಎಂದರು.

ನಟ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಆಗದಿರಲಿ ಎಂಬ ಕಾರಣಕ್ಕೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾರೆಯೇ ಹೊರತು ಬೇರೆನಿಲ್ಲ ಎಂದು ಊಹಾಪೋಹಗಳಿಗೆ ತೆರೆ ಇಟ್ಟರು.

ಸ್ಯಾಂಡಲವುಡ್ ನ ಪ್ರತಿಭಾನ್ವಿತ ನಟರಲ್ಲಿ ನಟ ದಿಗಂತ್‌ ಒಬ್ಬರು. ಇತ್ತೀಚಿಗೆ ದಿಗಂತ್ ಅವರು ಕುಟುಂಬಸ್ಥರೊಂದಿಗೆ ಗೋವಾಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ಸಮುದ್ರ ತೀರದಲ್ಲಿ ಬ್ಯಾಕ್​ ಫ್ಲಿಪ್ ಮಾಡಲು ಯತ್ನಿಸಿದಾಗ ಆಕಸ್ಮಿಕವಾಗಿ ನೆಲಕ್ಕೆ ಬಿದ್ದು ಕುತ್ತಿಗೆಗೆ ಬಲವಾದ ಪಡೆಟ್ಟು ಬಿದ್ದಿತ್ತು. ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾದರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಇಂದು ಏರ್ ಲಿಫ್ಟ್ ಮಾಡಲಾಗಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version