ದಿನದ ಸುದ್ದಿ

ಎರೆ ಹುಳುವಿಗೂ ಥ್ಯಾಂಕ್ಸ್ ಹೇಳಿದ ನಟ ಕಿಶೋರ್ 

ಸರಳವಾಗಿ ಬದುಕುತ್ತಿರುವ ಹುಲಿ ಅಲಿಯಾಸ್ ಕಿಶೋರ್ ಅವರು ಮೊನ್ನೆ ಫೇಸ್‍ಬುಕ್‍ನಲ್ಲಿ ಬರೆದ ಪೋಸ್ಟ್‍ವೊಂದು ಗಮನ ಸೆಳೆದಿದೆ. ನಟನೆಯ ಜತೆ ಕೃಷಿಯಲ್ಲೂ ಆಸಕ್ತಿಇರುವ ಕಿಶೋರ್ ಅವರು ಎರೆಹುಳವೊಂದಕ್ಕೆ ಥ್ಯಾಂಕ್ಸ್ ಹೇಳಿ ಅದರ ಫೋಟೊ ಅಪ್‍ಲೋಡ್ ಮಾಡಿದ್ದಾರೆ.

Published

on

ಸುದ್ದಿದಿನ ಡೆಸ್ಕ್: ಕನ್ನಡದ ಖ್ಯಾತ ನಟ ಕಿಶೋರ್ ಅವರು ಸಾವಯವ ಕೃಷಿಯಲ್ಲಿ ತೊಡಗಿರುವ ವಿಷಯ ಎಲ್ಲರಿಗೂ ಗೊತ್ತಿರುವ ವಿಷಯ.
ಸರಳವಾಗಿ ಬದುಕುತ್ತಿರುವ ಹುಲಿ ಅಲಿಯಾಸ್ ಕಿಶೋರ್ ಅವರು ಮೊನ್ನೆ ಫೇಸ್‍ಬುಕ್‍ನಲ್ಲಿ ಬರೆದ ಪೋಸ್ಟ್‍ವೊಂದು ಗಮನ ಸೆಳೆದಿದೆ.
ನಟನೆಯ ಜತೆ ಕೃಷಿಯಲ್ಲೂ ಆಸಕ್ತಿಇರುವ ಕಿಶೋರ್ ಅವರು ಎರೆಹುಳವೊಂದಕ್ಕೆ ಥ್ಯಾಂಕ್ಸ್ ಹೇಳಿ ಅದರ ಫೋಟೊ ಅಪ್‍ಲೋಡ್ ಮಾಡಿದ್ದಾರೆ.
“ಇವಳೇ ನನ್ನ ಆಸ್ತಿ. ನನ್ನ ಸಂಪತ್ತು, ನನ್ನ ಶ್ರೀಮಂತಿಕೆ. ಹಣವಿಲ್ಲದ, ಹಣ ಕೇಳದ,ಕತ್ತರಿಸಿ ಬಿದ್ದರೂ ಎರಡಾಗಿ ನನಗಾಗಿ ದುಪ್ಪಟ್ಟು ದುಡಿವ ಗೆಳತಿ. ನಿನಗೆ ನಮನ” ಎಂದು ಕಿಶೋರ್ ಅವರು ತಮ್ಮ ಪೋಸ್ಟ್‍ನಲ್ಲಿ ಬರೆದುಕೊಂಡಿದ್ದಾರೆ. ಕಿಶೋರ್ ಅಭಿಮಾನಿಗಳು ಈ ಪೋಸ್ಟ್‍ಗೆ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version