ದಿನದ ಸುದ್ದಿ

ಎಡಿಜಿಪಿ ಬಂಧನ ; ಹೈಕೋರ್ಟ್‌ ನ್ಯಾಯಮೂರ್ತಿ ಹೆಚ್‌.ಪಿ ಸಂದೇಶ್‌ ಛೀಮಾರಿ

Published

on

ಸುದ್ದಿದಿನ,ಬೆಂಗಳೂರು: ಭ್ರಷ್ಟಾಚಾರ ನಿಗ್ರಹದಳದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಸೀಮಂತ್‌ ಕುಮಾರ್‌ ಸಿಂಗ್‌ ಅವರ ವಿರುದ್ಧ ಹೈಕೋರ್ಟ್‌ ನ್ಯಾಯಮೂರ್ತಿ ಹೆಚ್‌ಪಿ ಸಂದೇಶ್‌ ಕಿಡಿಕಾರಿದ್ದಾರೆ.

ಎಸಿಬಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಇಂದು ಇದರ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ನನ್ನನ್ನೇ ವರ್ಗಾವಣೆ ಮಾಡುತ್ತೀನಿ ಎಂಬ ಬೆದರಿಕೆ ಬಂದಿದೆ. ನಾನು ಈ ಬೆದರಿಕೆಯನ್ನು ಸ್ವೀಕರಿಸಲು ಸಿದ್ಧನಿದ್ದೇನೆ. ನನ್ನನ್ನು ವರ್ಗಾವಣೆ ಮಾಡಲಿ. ಎಸಿಬಿ ಎಡಿಜಿಪಿ ತುಂಬಾ ಪವರ್‌ಫುಲ್‌ ಆಗಿದ್ದಾರಂತೆ. ಒಬ್ಬ ವ್ಯಕ್ತಿ ಇದನ್ನು ನನಗೆ ತಿಳಿಸಿದ್ಧಾರೆ.

ನಾನು ರೈತನ ಮಗ, ವರ್ಗಾವಣೆ ಅಥವಾ ನನ್ನ ಜವಾಬ್ದಾರಿಯಿಂದ ತೆಗೆದರೆ, ನಾನು ಉಳುಮೆ ಮಾಡಲೂ ಸಿದ್ಧನಿದ್ದೇನೆ. ಜಡ್ಜ್ ಆದ ನಂತರ ತಂದೆಯ 4 ಎಕರೆ ಜಮೀನು ಮಾರಿದ್ದೇನೆ. ನಾನು ಯಾವುದೇ ಪಕ್ಷದ ಸಿದ್ಧಾಂತಕ್ಕೆ ಬದ್ಧನಾಗಿಲ್ಲ ಈ ವಿಡಿಯೋ ದಲ್ಲಿ ಹೇಳಿದ್ದಾರೆ.

ಇದರ ಬೆನ್ನಲ್ಲೇ ನಿನ್ನೆ(ಸೋಮವಾರ) ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಹಾಗೂ ನಿರ್ಗಮ ಬೆಂಗಳೂರು ಜಿಲ್ಲಾಧಿಕಾರಿಯನ್ನ ಸಿಐಡಿ ಬಂಧನ ಮಾಡಿರುವುದನ್ನ ಇಲ್ಲಿ ಸ್ಮರಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Trending

Exit mobile version