ದಿನದ ಸುದ್ದಿ

ಪಿಯುಸಿ ಮುಗಿದ ನಂತರ ಮುಂದೇನು..? ವಿದ್ಯಾರ್ಥಿ ಪಾಲಕರೆ ಚಿಂತೆ ಬಿಡಿ..!

Published

on

ಭಾರತದ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪ್ರಾತಃ ಸ್ಮರಣಿಯರಾದ ಸರ್ ಎಂ ವಿಶ್ವೇಶ್ವರಯ್ಯ ಅವರನ್ನು ಸೆಪ್ಟೆಂಬರ್ 15 ರಂದು ವಿಷೇಶವಾಗಿ ನೆನಪಿಸಿಕೊಳ್ಳಲಾಗುತ್ತಿದೆ. ಇವರ ಜನ್ಮ ದಿನವನ್ನು (ಸೆಪ್ಟೆಂಬರ್ 15) ಭಾರತದಲ್ಲಿ ಪ್ರತಿ ವರ್ಷ ಇಂಜಿನಿಯರ್ಸ ದಿನವಾಗಿ ಆಚರಿಸಲಾಗುತ್ತಿದೆ. ಎಲ್ಲ ಇಂಜಿನಿಯರ್ಸಗಳಿಗೆ ಹ್ಯಾಪಿ ಇಂಜಿನಿಯರ್ಸ ಡೇ.

ಈ ಒಂದು ಸಂದರ್ಭದಲ್ಲಿ ಭಾರತದ ಸಾಫ್ಟ್ ವೇರ್ ಇಂಜಿನಿಯರ್ಸಗಳು ದೇಶ-ವಿದೇಶಗಳಲ್ಲಿ ತಮ್ಮದೇ ಆದ ಚಾಪನ್ನು ಮುಡಿಸುತ್ತಿದ್ದಾರೆ. ಈ 21ನೇ ಶತಮಾನದಲ್ಲಿ ಸಾಫ್ಟ್ ವೇರ್ ಕ್ಷೇತ್ರವು ಅತ್ಯಂತ ಬೇಡಿಕೆಯುಳ್ಳ ಕ್ಷೇತ್ರವಾಗಿದೆ. ಈ ಸಂದರ್ಭದಲ್ಲಿ ಬಿ.ಸಿ.ಎ ಪದವಿ ವಿಭಾಗವು ತನ್ನದೇ ಆದ ಕೊಡುಗೆಯನ್ನು ಕೊಡುತ್ತಿದೆ.

ಇವತ್ತಿನ 21ನೇ ಶತಮಾನದ ಕಂಪ್ಯೂಟರ್ ಯುಗದಲ್ಲಿ ಎಲ್ಲವೂ ಗಣಕೀಕೃತವಾಗಿದೆ ಅದ್ದರಿಂದ ಯಂತ್ರಧಾರಿತ ತಿಳುವಳಿಕೆ ಬಹಳ ಪ್ರಮುಖ್ಯತೆ ಪಡೆದಿದೆ ಕಂಪ್ಯೂಟರ್ ಕಲಿತ ವ್ಯಕ್ತಿ ಇವತ್ತು ಸಂತೋಷದ ಜೀವನ ನಡೆಸಬಹುದಾಗಿದೆ. 1990 ಜಾಗತೀಕರಣದ ನಂತರ ಕಾಗದ ಬಳಕೆಯನ್ನು ಸಂಪೂರ್ಣವಾಗಿ ತೊಡೆದು ಎಲ್ಲವೂ ಗಣಕೀಕೃತವಾಗಿದೆ. ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳಲುಅನೇಕ ಕೋರ್ಸುಗಳಿವೆ ಅದರಲ್ಲಿ ಬಿ.ಸಿ.ಎ ದಿನದಿಂದ ದಿನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ.

ಬಿಸಿಎ ಮಾಡಿದವರಿಗೆ ಬಿ.ಇ ಗೆ ಸಮಾನಾಂತರ ಅವಕಾಶಗಳು ಸಿಗುತ್ತಿವೆ. ಬಿಸಿಎ ಮಾಡಿದವರು ಕೇವಲ ಕಂಪ್ಯೂಟರ್ ಜ್ಞಾನ ಅಲ್ಲದೆ ಅನೇಕ ಕೌಶಲ್ಯಗಳ ಪ್ರಾಬ್ಲಮ್ ಸಾವ್ಲಿಂಗ್ ಟೆಕ್ನಿಕ್, ಕಮ್ಯುನೀಕೆಶನ್,ಮತ್ತು ತಂತ್ರಜ್ಞಾನ ಆಧಾರಿತ ಎಲ್ಲ ಜ್ಞಾನವನ್ನು ಪಡೆದುಕೊಳ್ಳಬಹುದಾಗಿದೆ. ಅದಲ್ಲದೆ ಹೊಸ ಶಿಕ್ಷಣ ನೀತಿಯಲ್ಲಿ ಕಂಪ್ಯೂಟರ್ ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಆರನೆಯ ತರಗತಿಯಿಂದ ಕೋಡಿಂಗ್ ಹೇಳಿಕೊಡಲಾಗುತ್ತಿದೆ ಮುಂದಿನ ದಿನಗಳಲ್ಲಿ ಎಲ್ಲರೂ ಕಂಪ್ಯೂಟರ್ ಜ್ಞಾನವನ್ನು ಪಡೆದುಕೊಳ್ಳಲೇಬೇಕು.

ಕಂಪ್ಯೂಟರ್ ಜ್ಞಾನ ಇಲ್ಲದವನು ಬದುಕುವುದು ಕಷ್ಟಕರವಾಗಲಿದೆಬಿ.ಸಿ.ಎ ಮುಗಿಸಿದ ತಕ್ಷಣ ನೀವು ಉನ್ನತ ಶಿಕ್ಷಣದಲ್ಲಿ ಎಂಸಿಎ, ಎಂಎಸ್, ಎಂಎಸ್ಸಿ, ಎಂಬಿಎ ಮಾಡಬಹುದು. ಅಲ್ಲದೆ ತಕ್ಷಣ ಉದ್ಯೋಗವನ್ನು ಪಡೆಯುವುದಾಗಿದೆ ಬಿ.ಸಿ.ಎ ಮುಗಿದ ತಕ್ಷಣ ಯಾವುದಾದರೂ ಒಂದು ಆರು ತಿಂಗಳ ತರಬೇತಿ ಪಡೆದುಕೊಂಡು ನೀವು ತಿಂಗಳಿಗೆ 25 ರಿಂದ 30 ಸಾವಿರ ರೂಪಾಯಿ ಸಂಪಾದಿಸಬಹುದಾಗಿದೆ.

2-3 ವರ್ಷಗಳ ನಂತರ 70 ರಿಂದ 80 ಸಾವಿರ ಸಂಬಳ ಗಳಿಸಬಹುದಾಗಿದೆ. ಪಿಯುಸಿ 12ನೇ ತರಗತಿಯಲ್ಲಿ ವಾಣಿಜ್ಯಶಾಸ್ತ್ರ ಕಲಿತವರು ಮರಳಿ ವಿಜ್ಞಾನ ವಿಭಾಗಕ್ಕೆ ಬರಲು ಇದೊಂದು ಉತ್ತಮ ಅವಕಾಶ. ಬಿ.ಸಿ.ಎ ಕಲಿತ ವಿದ್ಯಾರ್ಥಿ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಉದಾಹರಣೆಗೆ : ಎಸ್‍ಡಿಸಿ, ಬ್ಯಾಂಕಿಂಗ್, ಡಿಫೆನ್ಸ್ ಸರ್ವಿಸ್, ಆರ್‍ಆರ್‍ಬಿ, ಪಿಡಿಒ ಇತ್ಯಾದಿ ಅಲ್ಲದೇ ಖಾಸಗಿ ಕಂಪನಗಳಲ್ಲೂ ಕೆಲಸ ಮಾಡಬಹುದಾಗಿದೆ.

ಅಲ್ಲದೆ ಸ್ವಂತ ಉದ್ಯೋಗವನ್ನು ಅಥವಾ ಉನ್ನತ ಶಿಕ್ಷಣವನ್ನು ಪಡೆಯಬಹುದಾಗಿದೆ ಕಮಪನಗಳು ಕೂಡ ಇತ್ತೀಚಿನ ದಿನಗಳಲ್ಲಿ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ನೀಡುತ್ತಿವೆ. ಇವತ್ತಿನ ದಿನ ಕಂಪ್ಯೂಟರ್ ಜ್ಞಾನ ಇಲ್ಲದಿದ್ದರೆ ಎಲ್ಲರೂ ಕೂಡ ಅನಕ್ಷರಸ್ಥರೇ, ಯಾಕೆ ಬಿಸಿಎ ಮಾಡಬೇಕೆಂದರೆ ಅದು ಕೂಡ ಒಂದು ಪದವಿ ಕೋರ್ಸ್ ಸರ್ಟಿಫಿಕೇಟ್ ಕೋರ್ಸ್ ಅಲ್ಲ. ಇಂಜಿನಿಯರಿಂಗ್ ನಲ್ಲಿ ಕಲಿಸಿಕೊಡುವ ಎಲ್ಲ ವಿಷಯಗಳನ್ನು ಬಿಸಿಎ ನಲ್ಲಿಯೂ ಕೂಡ ಕಲಿಯಬಹುದು.

ಇದಕ್ಕೆ ತಗಲುವ ವೆಚ್ಚವೂ ಕೂಡ ಇತರೆ ಕೋರ್ಸ್‍ಗಳಿಗೆ ಹೋಲಿಸಿದರೆ ಕಡಿಮೆ. ಬಿಇಎ ಪದವಿ ಮುಗಿದ ತಕ್ಷಣ ಪದವಿ ಮೇಲಿನ ಎಲ್ಲ ಹುದ್ದೆಗಳಿಗೂ ಅರ್ಜಿ ಹಾಕಬಹುದು ಮತ್ತು ಇಂಜಿನಿಯರಿಂಗ್ ಪದವಿಗೆ ಹೋಲಿಸಿದರೆ ಇದಕ್ಕೆ ತಗಲುವ ಸಮಯ ಕೇವಲ ಮೂರು ವರ್ಷ. ಉದ್ಯೋಗ ನೀಡುವವರು ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಇವತ್ತಿನ ದಿನ ಕಂಪ್ಯೂಟರ್ ಜ್ಞಾನ ಬೇಕು ಅಂತ ಹೇಳುತ್ತಾರೆ ಏಕೆಂದರೆ ಅವರು ಮಾಡುವ ಕೆಲಸವು ಪ್ರತಿಯೊಂದು ಕಂಪ್ಯೂಟರ್ ಮೇಲೆ ಬಹಳ ಅವಲಂಬನೆಯಾಗಿರುತ್ತದೆ.

ಲೇಖಕರು:ಧರ್ಮರಾಜ ಕುಂಬಾರ
ವಿಭಾಗದ ಮುಖ್ಯಸ್ಥರು ಸಂಗಮೇಶ್ವರ ಬಿಸಿಎ ಪದವಿ ಮಹಾವಿದ್ಯಾಲಯ ಚಡಚಣ.
ಮೊ ಸಂಖ್ಯೆ:9742233578

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version