ದಿನದ ಸುದ್ದಿ

ದಾವಣಗೆರೆಯಲ್ಲಿ ಆಕಾಶ್+ಬೈಜೂಸ್ ಮೊದಲ ಕ್ಲಾಸ್‌ರೂಂ ಸೆಂಟರ್ ಆರಂಭ

Published

on


  • ಪರೀಕ್ಷಾ ಸಿದ್ಧತಾ ಸೇವೆಗಳ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಆಕಾಶ್+ಬೈಜೂಸ್ 24 ರಾಜ್ಯಗಳಲ್ಲಿ 275 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ತರಬೇತಿ
  • ವಾರ್ಷಿಕ 2.75 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ
  • ದಾವಣಗೆರೆಯ ಆಕಾಶ್+ಬೈಜೂಸ್ ಕ್ಲಾಸ್‌ರೂಂ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನೀಡಲಾಗುತ್ತದೆ ನಡೆಸಲು ತರಬೇತಿ
  • ಈ ಕೇಂದ್ರದಲ್ಲಿ 11 ಕ್ಲಾಸ್‌ರೂಂಗಳಲ್ಲಿ 1200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ

ಸುದ್ದಿದಿನ,ದಾವಣಗೆರೆ: ವೈದ್ಯರು ಮತ್ತು ಐಐಟಿಗಳಾಗಬೇಕೆಂದು ಸಾವಿರಾರು ವಿದ್ಯಾರ್ಥಿಗಳು ಹೊಂದಿರುವ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ದೇಶದಲ್ಲಿ ಪರೀಕ್ಷಾ ಪೂರ್ವ ಸಿದ್ಧತಾ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಆಕಾಶ್+ಬೈಜೂಸ್ ಇದೀಗ ತನ್ನ ಜಾಲವನ್ನು ವಿಸ್ತರಣೆ ಮಾಡುವುದನ್ನು ಮುಂದುವರಿಸಿದ್ದು, ಕರ್ನಾಟಕದ ದಾವಣಗೆರೆಯಲ್ಲಿ ತನ್ನ ಮೊದಲ ಕ್ಲಾಸ್‌ರೂಂ ಸೆಂಟರ್ ಅನ್ನು ಆರಂಭ ಮಾಡಿದೆ. ಈ ಕ್ಲಾಸ್‌ರೂಂ ಸೆಂಟರ್‌ನಲ್ಲಿ 11 ಕ್ಲಾಸ್‌ರೂಂಗಳಿದ್ದು, ಇಲ್ಲಿ 1200 ವಿದ್ಯಾರ್ಥಿಗಳಿಗೆ ತರಗತಿ ಸೌಲಭ್ಯ ಕಲ್ಪಿಸಲು ಅವಕಾಶವಿದೆ.

ದಾವಣಗೆರೆಯ ನಂ:54/2, 9 ನೇ ಡಿವಿಷನ್, 5 ನೇ ವಾರ್ಡ್, ಎವಿಕೆ ಕಾಲೇಜು ರಸ್ತೆ, ಎವಿಕೆ ಕಾಲೇಜು ಎದುರು, ಜಯಚಾಮರಾಜ ಒಡೆಯರ್‌ ರಸ್ತೆ- ಇಲ್ಲಿ ಹೊಸ ಆಕಾಶ್+ಬೈಜೂಸ್ ಕ್ಲಾಸ್‌ರೂಂ ಸೆಂಟರ್ ಆರಂಭವಾಗಿದೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಫೌಂಡೇಶನ್ ಮಟ್ಟದ ಕೋರ್ಸ್‌ಗಳು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಈ ಕ್ಲಾಸ್‌ರೂಂ ಸೆಂಟರ್‌ನಲ್ಲಿ ತರಬೇತಿ ನೀಡಲಾಗುತ್ತದೆ. ಇದಲ್ಲದೇ ಒಲಿಂಪಿಯಾಡ್ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಸೂಕ್ತವಾದ ತರಬೇತಿಯನ್ನು ನೀಡಲಾಗುತ್ತದೆ.

ಈ ಕ್ಲಾಸ್‌ರೂಂ ಸೆಂಟರ್ ಅನ್ನು ಆಕಾಶ್+ಬೈಜೂಸ್‌ನ ಪ್ರಾದೇಶಿಕ ನಿರ್ದೇಶಕ ಧೀರಜ್ ಕುಮಾರ್ ಮಿಶ್ರಾ ಅವರು ಕಂಪನಿಯ ಅಧಿಕಾರಿಗಳ ಸಮ್ಮುಖದಲ್ಲಿ ಮಂಗಳವಾರ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಕಾಶ್+ಬೈಜೂಸ್‌ನ ವ್ಯವಸ್ಥಾಪಕ ನಿರ್ದೇಶಕ ಆಕಾಶ್ ಚೌಧರಿ ಅವರು, “ಒಲಿಂಪಿಯಾಡ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಮತ್ತು ವೈದ್ಯರು ಹಾಗೂ ಐಐಟಿಯನ್‌ಗಳಾಗಬೇಕೆಂಬ ಮಹದಾಸೆಯನ್ನು ಹೊಂದಿರುವ ದಾವಣಗೆರೆ ಮತ್ತು ಸುತ್ತಮುತ್ತಲಿನ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಇಂದು ದೇಶಾದ್ಯಂತ ತರಬೇತಿ ಕೇಂದ್ರಗಳ ವಿಸ್ತಾರದ ಮೂಲಕ ಆಕಾಶ್+ಬೈಜೂಸ್ ಸಂಸ್ಥೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಮ್ಮ ಶೈಕ್ಷಣಿಕ ವಿಷಯದ ಗುಣಮಟ್ಟ ಮತ್ತು ನಮ್ಮ ಬೋಧನಾ ವಿಧಾನಗಳ ಪರಿಣಾಮಕಾರಿತ್ವವು ವಿದ್ಯಾರ್ಥಿಗಳ ಆಯ್ಕೆಗಳ ಸಂಖ್ಯೆಯಿಂದ ಸಾಕ್ಷಿಯಾಗಿದೆ. ಪದವಿಪೂರ್ವ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಅರ್ಹತೆ ಪಡೆಯಲು ಉದ್ದೇಶಿಸಿರುವ ವಿದ್ಯಾರ್ಥಿಗಳಿಗೆ ಆಕಾಶ್+ಬೈಜೂಸ್ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ” ಎಂದು ತಿಳಿಸಿದರು.

“ದಾವಣಗೆರೆಯಲ್ಲಿ ನಮ್ಮ ಮೊದಲ ಕ್ಲಾಸ್‌ರೂಂ ಸೆಂಟರ್‌ ಅನ್ನು ಆರಂಭಿಸುವ ಮೂಲಕ ಕರ್ನಾಟಕದಲ್ಲಿ ನಮ್ಮ ಫೂಟ್ಪ್ರಿಂಟ್ ಅನ್ನು ವಿಸ್ತಾರ ಮಾಡಿಕೊಳ್ಳುತ್ತಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ. ನಮ್ಮ ರಾಷ್ಟ್ರೀಯ ಜಾಲಕ್ಕೆ ಈ ಶಾಖೆಯ ಸೇರ್ಪಡೆಯು ಪ್ರಮಾಣೀಕೃತ ಗುಣಮಟ್ಟದ ಬೋಧನೆ, ಆಧುನಿಕ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಶಕ್ತಗೊಂಡ ವ್ಯವಸ್ಥೆಯನ್ನು ಬಳಸಿಕೊಂಡು ದೇಶಾದ್ಯಂತ ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲಕರವಾದ ವಾತಾವರಣವನ್ನು ನೀಡುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ಅವರು ಹೇಳಿದರು.

ಆಕಾಶ್‌ನಲ್ಲಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಪ್ರವೇಶ/ವಿದ್ಯಾರ್ಥಿ ವೇತನ ಪರೀಕ್ಷೆ(iACST) ಅಥವಾ ಎಎನ್ ಟಿ ಎಚ್ ಇ (ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಎಕ್ಸಾಂ)ಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಆಕಾಶ್‌ನಲ್ಲಿ ನೀಡಲಾಗುವ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ವಿವಿಧ ಪರೀಕ್ಷೆಗಳಿಗೆ ವ್ಯಾಪಕವಾಗಿ ಮತ್ತು ಸಮಗ್ರವಾಗಿ ಸಿದ್ಧಪಡಿಸುತ್ತವೆ. ಇದಲ್ಲದೇ, ಅಳವಡಿಸಿಕೊಂಡ ಬೋಧನಾ ವಿಧಾನವು ಪರಿಕಲ್ಪನಾ ಮತ್ತು ಅಪ್ಲಿಕೇಶನ್-ಆಧಾರಿತ ಕಲಿಕೆಯ ಮೇಲೆ ಕೇಂದ್ರೀಕರಿಸುವ ಮೂಲಕ ಅದನ್ನು ಬ್ಯಾಂಡ್ ಆಗಿ ಪ್ರತ್ಯೇಕಿಸುತ್ತದೆ.

ಆಕಾಶ್‌ನಲ್ಲಿರುವ ಪರಿಣತ ಅಧ್ಯಾಪಕರು ವಿದ್ಯಾರ್ಥಿಗಳಿಗೆ ತಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಆಧುನಿಕ ಮತ್ತು ಸಂವಾದಾತ್ಮಕ ಬೋಧನಾ ವಿಧಾನಗಳನ್ನು ಅನುಸರಿಸುತ್ತಾರೆ. ಆಕಾಶ್‌ನ ಸಾಬೀತಾದ ಯಶಸ್ಸಿನ ದಾಖಲೆಯು ಅದರ ವಿಶಿಷ್ಟ ಶಿಕ್ಷಣ ವಿತರಣಾ ವ್ಯವಸ್ಥೆಗೆ ಕಾರಣವಾಗಿದೆ. ಇದು ಕೇಂದ್ರೀಕೃತ ಮತ್ತು ಫಲಿತಾಂಶ ಆಧಾರಿತ ಬೋಧನಾ ವಿಧಾನಕ್ಕೆ ಒತ್ತು ನೀಡುತ್ತಿದೆ ಎಂದು ತಿಳಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version