ಲೈಫ್ ಸ್ಟೈಲ್
ರೆಸಿಪಿ | ಮಳೆಗಾಲಕ್ಕೆ ಆಲೂ ಮಟರ್ ಪಲಾವ್ ಮಾಡಿ ತಿನ್ನಿ
ಸುದ್ದಿದಿನ ಡೆಸ್ಕ್ : ಕುಕ್ಕರ್ ಒಲೆ ಮೇಲಿಟ್ಟು 2 ಚಮಚ ತುಪ್ಪ, ಸ್ವಲ್ಪ ಎಣ್ಣೆ ಹಾಕಿ ಕಾಯಿಸಿ, ಚಕ್ಕೆ, ಲವಂಗ, ಪಲಾವ್ ಎಲೆಯನ್ನು ಹಾಕಿ. ತರುವಾಯ ಈರುಳ್ಳಿ, ಹಸಿಮೆಣಸಿನ ಕಾಯಿ ಹಾಕಿ ಕೆಂಪಗೆ ಹುರಿಯಿರಿ.
ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮೆಟೋ, ಅರಿಶಿನ, ಖಾರದ ಪುಡಿ, ಉಪ್ಪು, ಬಟಾಣಿ, ಆಲೂಗಡ್ಡೆ, ಗರಂ ಮಸಾಲೆ, ನಿಂಬೆ ಹಣ್ಣು, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಅಕ್ಕಿ ಹಾಗೂ 2 ಬಟ್ಟಲು ನೀರು ಹಾಕಿ ಮಿಶ್ರಣ ಮಾಡಿ. ಕುಕ್ಕರ್ ಮುಚ್ಚಳ ಮುಚ್ಚಿ 2 ಕೂಗು ಕೂಗಿಸಿದರೆ ರುಚಿಕರವಾದ ಆಲೂ ಮಟರ್ ಪಲಾವ್ ಸವಿಯಲು ಸಿದ್ಧ.
ಸುದ್ದಿದಿನ.ಕಾಂ|ವಾಟ್ಸಾಪ್|9980346243