ಬಹಿರಂಗ

ಡಾ.ಎಸ್.ರಾಧಾಕೃಷ್ಣನ್ ರವರಿಗೆ ಬಾಬಾಸಾಹೇಬ್ ಅಂಬೇಡ್ಕರರ ಒಂದು ಉತ್ತರ : ಮಿಸ್ ಮಾಡ್ದೆ ಓದಿ..!

Published

on

 

  • ರಘೋತ್ತಮ ಹೊ. ಬ

ಮ್ಮೆ ಪ್ರೊ.ರಾಧಾಕೃಷ್ಣನ್ ರವರು ತಮ್ಮ ಹೇಳಿಕೆಯೊಂದರಲ್ಲಿ ಹಿಂದುತ್ವದ ಶ್ರೇಷ್ಠತೆಯನ್ನು ಎತ್ತಿಹಿಡಿಯಲು ಒಂದು ವಾದವಿದೆ ಎನ್ನುತ್ತ ‘ಹಿಂದುತ್ವ ಕಾಲದ ಅನೇಕ ಸಂಕಷ್ಟಗಳನ್ನು ಎದುರಿಸಿ ಬದುಕಿ ಉಳಿದಿದೆ ಮತ್ತು ಅದು ಈಗಲೂ ಉಳಿದಿದೆ ಆದರೆ ಇತರ ಕೆಲವು ಧರ್ಮಗಳು ಮತ್ತು ಪಂಥಗಳು ಬಹಳ ಹಿಂದೆಯೇ ಸತ್ತು ಹೋಗಿವೆ’ ಎಂದರು.

ಈ ವಾದಕ್ಕೆ ಪ್ರತಿಕ್ರಿಯೆ ನೀಡುತ್ತ ಅಂಬೇಡ್ಕರ್ ರವರು “(ಡಾ.ರಾಧಾಕೃಷ್ಣನ್ ರ) ಈ ಹೇಳಿಕೆಯು ‘ಬದುಕಿರುವ ರೀತಿಯೇ ಬದುಕಿ ಉಳಿಯಲು ಯೋಗ್ಯ ಎಂಬುದಕ್ಕೆ ಸಾಕ್ಷಿ’ ಎಂಬ ಅನೈತಿಕ ವಾದಕ್ಕೆ ಆಧಾರವಾಗುವ ಸಾಧ್ಯತೆ ಇದೆ. ನನಗನಿಸುವಂತೆ, ಒಂದು ಸಮುದಾಯ ಬರೇ ಸಾಯುತ್ತದೆ ಉಳಿಯುತ್ತದೆ ಎಂಬ ಪ್ರಶ್ನೆಗಿಂತ ಆ ಸಮುದಾಯ ಯಾವ ಸಮತಲದಲ್ಲಿ ಉಳಿದಿದೆ ಎಂಬ ಪ್ರಶ್ನೆಯೇ ಮುಖ್ಯ. ಒಬ್ಬ ವ್ಯಕ್ತಿಗಾಗಲೀ ಒಂದು ಸಮಾಜಕ್ಕಾಗಲೀ ಸುಮ್ಮನೆ ಬದುಕುವುದಕ್ಕೂ ಯೋಗ್ಯತೆಯಿಂದ ಬದುಕುವುದಕ್ಕೂ ಒಂದು ಅಂತರ ಇದ್ದೇ ಇದೆ. ಬದುಕಿ ಉಳಿಯುವುದಕ್ಕೆ ನಾನಾ ವಿಧಗಳಿವೆ. ಆದರೆ ಆ ಎಲ್ಲ ವಿಧಗಳನ್ನು ಒಂದೇ ಸಮ ಎನ್ನಲಾಗುವುದಿಲ್ಲ. ಯುದ್ಧದಲ್ಲಿ ಹೋರಾಡಿ ಘನತೆಯಿಂದ ಬದುಕುವುದು ಒಂದು ವಿಧವಾದರೆ ಸೋಲನ್ನು ಒಪ್ಪಿಕೊಂಡು ಶರಣಾಗತನಾಗಿ ಬಂಧಿಯಂತೆ ಬದುಕುವುದೂ ಮತ್ತೊಂದು ವಿಧ. ಅಂದಹಾಗೆ ಹಿಂದೂಗಳು ತಾವು ಮತ್ತು ತಮ್ಮ ಜನರು ಬದುಕಿ ಉಳಿದಿದ್ದೇವೆ ಎಂಬ ಅಂಶಕ್ಕಷ್ಟೆ ಸಮಾಧಾನ ಪಡುವುದು ಉಪಯೋಗವಿಲ್ಲದ್ದು. ಮತ್ತು ಆತ ಪರಿಗಣಿಸಬೇಕಾದ್ದೆಂದರೆ ನಾನು ಯಾವ ಅರ್ಹತೆಯ ಮಟ್ಟದಲ್ಲಿ ಉಳಿದಿದ್ದೇನೆ ಎಂಬುದನ್ನು.

“ಈ ನಿಟ್ಟಿನಲ್ಲಿ ಆತ ಚಿಂತನೆ ನಡೆಸಿದರೆ, ನನಗೆ ನಂಬಿಕೆ ಇದೆ, ಆತ ತಾನು ಸುಮ್ಮನೇ ಉಳಿದಿದ್ದೇನೆ ಎಂಬ ಆ ಅಂಶದೆಡೆಗೆ ಹೆಮ್ಮೆ ಪಡುವುದನ್ನು ಖಂಡಿತ ನಿಲ್ಲಿಸುತ್ತಾನೆ. ಹಿಂದೂಗಳು ನಿರಂತರ ಸೋಲಿನ ಜೀವನವನ್ನು ಬದುಕಿದ್ದಾರೆ. ಅಂತ್ಯಕಾಣದ ಜೀವನ ಎಂದು ಯಾವುದು ಅವರಿಗೆ ಅನಿಸುತ್ತಿದೆಯೋ ಅದು ನಿಜಕ್ಕೂ ಅಂತ್ಯಕಾಣದ ಬದುಕಲ್ಲ ಮತ್ತು ಅದು(ಅಂತ್ಯ ಕಾಣದ ಜೀವನ) ಜೀವಿಸುವ ಒಂದು ಮಾದರಿ ಅಷ್ಟೆ. ಸಹೃದಯಿ ಹಿಂದೂಗಳಲ್ಲಿ ಈ ಸತ್ಯವನ್ನು ಅರ್ಥಮಾಡಿಕೊಂಡು ಹೆದರದಿರುವ ಯಾರನ್ನೆ ಆಗಲೀ ಖಂಡಿತ ಅಪಮಾನದ ಭಾವ ಕಾಡದಿರದು”.

(Dr.Babasaheb Ambedkar Writings and Speeches, Vol.17, Part.3, Pp.19)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version