ದಿನದ ಸುದ್ದಿ

ಡಾ.ಬಿ.ಆರ್. ಅಂಬೇಡ್ಕರರ 125 ಅಡಿ ಎತ್ತರದ ಪ್ರತಿಮೆಯ ಶಿಲಾನ್ಯಾಸ ಮಾಡಿದ ಆಂಧ್ರ ಸಿಎಂ

Published

on

ಸುದ್ದಿದಿನ,ವಿಶಾಖಪಟ್ಟಣಂ : ದೇಶದ ಅತಿ ದೊಡ್ಡ ಬಾಬಾ ಸಾಹೇಬ್ ಅಂಬೇಡ್ಕರ್ ರವರ 125 ಅಡಿ ಎತ್ತರದ ಪ್ರತಿಮೆಯ ಶಿಲಾನ್ಯಾಸ ವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಮಾಡಿದ್ದಾರೆ.

ವಿಶಾಖಪಟ್ಟಣಂ ನಗರದ ಸ್ವರಾಜ್ಯ ಮೈದಾನದಲ್ಲಿ ಈ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 20 ಎಕರೆ ಪ್ರದೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆ ಜೊತೆಗೆ ಸ್ಮಾರಕ ಭವನ ನಿರ್ಮಾಣ ಇರಲಿದೆ ಎಂದು ತಿಳಿದು ಬಂದಿದೆ.

ಬಾಬಾ ಸಾಹೇಬ್ ಅಂಬೇಡ್ಕರ್ ರವರು ಈ ದೇಶದ ಶಕ್ತಿಯಾಗಿದ್ದಾರೆ. ಶಿಕ್ಷಣ, ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ನ್ಯಾಯ ನೀಡುವ ಕಾರ್ಯವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಮಾಡಿದ್ದು ಅವರಿಗೆ ಗೌವರ ನೀಡಿಲು ಈ ಸ್ಮಾರಕ ನಿರ್ಮಾಣ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ತಿಳಿಸಿದ್ದಾರೆ ಜೊತೆಗೆ ವಿಶಾಖಪಟ್ಟಣಂ ನಗರದ ಸ್ವರಾಜ್ಯ ಮೈದಾನದಲ್ಲಿ ಹೆಸರೇನು ಬಾಬಾ ಸಾಹೇಬ್ ಅಂಬೇಡ್ಕರ್ ಸ್ವರಾಜ್ಯ ಪಾರ್ಕ್ ಎಂದು ಮರುನಾಮಕರಣವನ್ನು ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version