ದಿನದ ಸುದ್ದಿ

ಸಂವಿಧಾನದ ತಿದ್ದುಪಡಿ ಅನಿವಾರ್ಯ’ ಹೇಳಿಕೆ ; ಕ್ಷಮೆಯಾಚಿಸಿದ ಸಾಹಿತಿ ದೊಡ್ಡರಂಗೇಗೌಡ

Published

on

  • ಡಾ.ವಡ್ಡಗೆರೆ ನಾಗರಾಜಯ್ಯ

ಸಾಹಿತಿ ಪ್ರೊ.ದೊಡ್ಡರಂಗೇಗೌಡ ಅವರು ಮೊದಲು, “ಹಿಂದಿ ಭಾಷೆಯ ಹೇರಿಕೆಯನ್ನು ಕನ್ನಡಿಗರಾದ ನಾವು ತಿರಸ್ಕರಿಸಬಾರದು” ಎಂಬರ್ಥದ ಹೇಳಿಕೆಯನ್ನು ನೀಡಿದ್ದು ತಪ್ಪೆಂದು ಒಪ್ಪಿಕೊಂಡು ತಪ್ಪಿಗಾಗಿ ಕ್ಷಮೆ ಯಾಚಿಸಿದರು.

ಅವರು ಎರಡನೇ ಸಲ, “ಸಂವಿಧಾನದ ಕೆಲವು ಕಾನೂನುಗಳು ಇಂದಿಗೆ ಪ್ರಸ್ತುತವಲ್ಲ. ಸಂವಿಧಾನದ ತಿದ್ದುಪಡಿ ಅನಿವಾರ್ಯ” ಎಂದು ಹೇಳಿಕೆ ನೀಡಿದ್ದ ಕುರಿತು ಈಗ ಕ್ಷಮೆ ಯಾಚಿಸಿದ್ದಾರೆ. ಯಾವುದೇ ಸಾಹಿತಿಗೆ ಹೀಗೆ ಪದೇ ಪದೇ ಕ್ಷಮೆ ಯಾಚಿಸುವ ದುರ್ಗತಿ ಬರಬಾರದು.

ಸಾಹಿತಿ ದೊಡ್ಡರಂಗೇಗೌಡ ಕ್ಷಮೆಯಾಚನೆ ಪತ್ರ

ಅವರಿಗೆ ಕನ್ನಡಿಗರು ಮತ್ತು ಕನ್ನಡ ಮಾಧ್ಯಮದ ಮಕ್ಕಳನ್ನು ಕುರಿತು ಕಳಕಳಿ ಇದ್ದ ಪಕ್ಷದಲ್ಲಿ ಪ್ರಸ್ತುತ ಸಂದರ್ಭದಲ್ಲಿ ಅನ್ಯ ಭಾಷಿಕರ ಪ್ರಾಬಲ್ಯದಲ್ಲಿ ಕನ್ನಡಿಗರಾದ ನಾವು ಎದುರಿಸುತ್ತಿರುವ ಬದುಕಿನ ಬಿಕ್ಕಟ್ಟುಗಳನ್ನು ಕರಿತು ಮಾತಾಡಬೇಕಿತ್ತು.

ಇದನ್ನೂ ಓದಿ | ಪಾಂಡವರಿಗೂ ಭಾವ, ಕೌರವರಿಗೂ ಭಾವ..!

ಸಮ ಸಮಾಜದ ನಿರ್ಮಾಣದ ತುಡಿತ ದೊರಂಗೌ ಅವರಿಗೆ ಇದ್ದಿದ್ದೇ ಆಗಿದ್ದರೆ, “ಸಂವಿಧಾನದ ಕಾನೂನುಗಳು ಈಗಲೂ ಸಮರ್ಥವಾಗಿ ಅಳವಡಿಕೆಯಾಗಿಲ್ಲ ಯಾಕೆ? ಸಂವಿಧಾನದ ಆಶಯಗಳನ್ನು ಈಡೇರಿಸಲು ನಾವು ಶ್ರಮಿಸುತ್ತಿಲ್ಲ ಯಾಕೆ?” ಎಂದು ಪ್ರಶ್ನಿಸಬೇಕಿತ್ತು.

ಇಂತಹ ಯಾವುದೇ ಧೀರವಂತಿಕೆಯನ್ನು ಪ್ರದರ್ಶಿಸದಿರುವ ಪ್ರೊ.ದೊಡ್ಡರಂಗೇಗೌಡ ಅವರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಯಾವುದೇ ಅರ್ಹತೆ ಇರುವುದಿಲ್ಲ. ಸಂವಿಧಾನದ ಆಶಯಗಳನ್ನು ಈಡೇರಿಸುವ ನಡೆಗಳನ್ನು ರೂಢಿಸಿಕೊಂಡಿರದ ವ್ಯಕ್ತಿಯನ್ನು ಜಗದೋದ್ಧಾರಕನೆಂದು ಕೀರ್ತಿಸಿ ಭಟ್ಟಂಗಿ ಕವಿತೆಗಳನ್ನು ಬರೆಯುವ ಇವರ ಆಯ್ಕೆಯನ್ನು ಅನೂರ್ಜಿತಗೊಳಿಸುವುದು ಸೂಕ್ತ ಅನ್ನಿಸ್ತಿದೆ. ಆ ದಿಕ್ಕಿನಲ್ಲಿ ನಾವೆಲ್ಲರೂ ಒತ್ತಾಯಿಸೋಣ. ಇಂತಹ ಸನಾತನಿ ಕಾಲಾಳುಗಳಿಗೆ ಬುದ್ಧಿ ಕಲಿಸೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version