ದಿನದ ಸುದ್ದಿ
ಹಿಂದೂ ಹುಡುಗಿಯ ಮುಟ್ಟಿದವರ ಕೈ ಇರಬಾರದು ; ನಾವು ಇತಿಹಾಸ ಬರೆಯೋದೇ ಹೀಗೆ : ಅನಂತ ಕುಮಾರ್ ಹೆಗಡೆ
ಸುದ್ದಿದಿನ, ಕೊಡಗು : ಹಿಂದೂ ಹುಡುಗಿಯ ಮುಟ್ಟಿದವರ ಕೈ ಇರಬಾರದು. ನಾವು ಇತಿಹಾಸ ಬರೆಯೋದೇ ಹೀಗೆ, ಪೌರುಷ ಇದ್ರೆ ಇತಿಹಾಸ ಬರೆಯಿರಿ. ಸಮಾಜಕ್ಕೆ ಹಿಡಿದ ದೊಡ್ಡ ಗೆದ್ದಲು ಕಮ್ಯೂನಿಸ್ಟರು ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ನಗರದ ಪರಿವರ್ತನಾ ಟ್ರಸ್ಟ್ ಹಾಗೂ ಹಿಂದೂ ಜಾಗರಣ ವೇದಿಕೆ ಆಯೋಜನೆ ಮಾಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ದೇವರಿಗೆ ದುರ್ಬಲರೇ ಬೇಕಾಗಿದ್ದಾನೆ. ಅದಕ್ಕೆ ಕುರಿ,ಕೋಳಿಗಳನ್ನ ಬಲಿಕೊಡಲಾಗುತ್ತದೆ. ಆದರೆ ಆನೆ, ಹುಲಿಯನ್ನು ದೇವರಿಗೆ ಬಲಿಕೊಡಲ್ಲ ಏಕೆಂದರೆ ಅವು ಬಲಶಾಲಿಗಳು, ಆದ್ದರಿಂದ ನೀವೆಲ್ಲ ಬಲಶಾಲಿಗಳಾಗಿ ಬೆಳೆಯಬೇಕಾಗಿದೆ ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401