ದಿನದ ಸುದ್ದಿ

ಯುಪಿಯಲ್ಲಿ ಮತ್ತೊಬ್ಬ ದಲಿತ ಯುವತಿ ಮೇಲೆ ಅತ್ಯಾಚಾರ-ಕೊಲೆ : ಇಬ್ಬರ ಬಂಧನ

Published

on

ಸುದ್ದಿದಿನ ಡೆಸ್ಕ್ : ಉತ್ತರ ಪ್ರದೇಶದ ಇನ್ನೊಂದು ಜಿಲ್ಲೆಯಾದ ಬಲರಾಮ್‍ಪುರದಲ್ಲಿ ಮತ್ತೋರ್ವ ದಲಿತ ಯುವತಿ ಅತ್ಯಾಚಾರಕ್ಕೊಳಗಾಗಿ, ತೀವೃ ಗಾಯಗಳೊಂದಿಗೆ ಮೃತಪಟ್ಟಿದ್ದಾಳೆ.

ಬಲರಾಮ್ ಪುರದ ಗ್ರೈಸಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳಾದ ಶಾಹೀದ್ ಮತ್ತು ಸಾಹಿಲ್ ಎಂಬ ಯುವಕರನ್ನು ಪೋಲೀಸರು ಬಂಧಿಸಿದ್ದಾರೆ.

ಘಟನೆ ವಿವರ

22 ವರುಷದ ಈಕೆ ಮಂಗಳವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ (ಕೆಲ ವರದಿಗಳ ಪ್ರಕಾರ ಆಕೆ ಎರಡನೆಯ ವರುಷದ ಪದವಿ ಕಾಲೇಜಿನ ಅಡ್ಮಿಷನ್‍‍ಗಾಗಿ ಕಾಲೇಜಿಗೆ ಹೋಗಿ ಮನೆಗೆ ವಾಪಾಸ್ಸು ಬರುತ್ತಿದ್ದಳು) ಆಕೆಗೆ ಪರಿಚಯದ ಶಾಹಿದ್ ಹಾಗೂ ಸಾಹಿಲ್ ಎಂಬ ಇಬ್ಬರು ಯುವಕರು ಆಕೆಯನ್ನು ಬಲವಂತವಾಗಿ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ.

ಆಕೆ ತೀವೃ ರಕ್ತಸ್ರಾವ ಹಾಗೂ ಯುವಕರ ಮೃಗೀಯ ವರ್ತನೆಯಿಂದ ನಡೆಯಲೂ ಆಗದ ಸ್ಥಿತಿಯಲ್ಲಿ ಇದ್ದುದ್ದನ್ನು ಕಂಡು ಹೆದರಿದ ಅತ್ಯಾಚಾರಿಗಳು, ಅದೇ ಯುವಕರು ಆಕೆಯನ್ನು ಆವರ ಪರಿಚಯದ ವೈದ್ಯರ ಬಳಿಗೆ ಕೊಂಡೊಯ್ದು, ಗ್ಲೂಕೋಸ್ ಡ್ರಿಪ್ಸ್ ಹಾಕಿ, ರಿಕ್ಷಾದಲ್ಲಿ ಕುಳ್ಳಿರಿಸಿ ಮನೆಗೆ ಕಳುಹಿಸಿದ್ದಾರೆ.

ಅಷ್ಟರವರೆಗೆ ಆಕೆಯ ಹುಡುಕಿ ಕಂಗಾಲಾಗಿದ್ದ ಹೆತ್ತವರು, ಆಕೆಯನ್ನು ತಂದ ರಿಕ್ಷಾ ಮನೆ ಬಳಿ ಬರುತ್ತಿದ್ದಂತೆ, ಆಕೆಯ ಪರಿಸ್ಥಿತಿಯನ್ನು ಕಂಡು, ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಚಿಕಿತ್ಸೆಗೆ ಪ್ರತಿಕ್ರಯಿಸದೆ, ಆಕೆ ಮೃತಪಟ್ಟಿದ್ದಾಳೆ. ಹೆತ್ತವರನ್ನು ನೋಡುತ್ತಲೇ “ಅಮ್ಮಾ ನನಗೆ ತೀವೃ ನೋವಾಗುತ್ತಿದೆ. ನಾನು ಬದುಕುಳಿಯಲಾರೆ,” ಎಂದು ಆಕೆ ನೋವಿನಿಂದ ನರಳುತ್ತಿದ್ದಳೆಂದು ಆಕೆಯ ಹೆತ್ತವರು ಹೇಳಿದ್ದಾರೆ. ಅವರ ಪ್ರಕಾರ ಅತ್ಯಾಚಾರಿಗಳು ಆಕೆಯ ಕೈಗಳನ್ನು ಮುರಿದಿದ್ದರು ಹಾಗೂ ಆಕೆಯ ಬೆನ್ನುಮೂಳೆಗೂ ಪೆಟ್ಟಾಗಿತ್ತು.‌ ಈ ಸಂಬಂಧ ಅತ್ಯಾಚಾರಿಗಳ ಮೇಲೆ ಕುಟುಂಬದವರು ಅತ್ಯಾಚಾರ-ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.

ಪೋಲಿಸ್ ಹೇಳಿಕೆ

ಬಲರಾಮ್ ಪೋಲೀಸರು ಮತ್ತಿತರ ಮರಣೋತ್ತರ ಪರೀಕ್ಷೆಯಲ್ಲಿ ಯುವತಿಯ ಕೈ-ಕಾಲು ಮುರಿದಿರುವುದು ದೃಢಪಟ್ಟಿಲ್ಲವೆಂದು ಟ್ವೀಟ್ ಮಾಡುವುದರ ಮೂಲಕ ಆರೋಪವನ್ನು ಅಲ್ಲಗಳೆದಿದ್ದಾರೆ.

ದೇವಿಪಟ್ನ ವಲಯದ ಐಜಿಪಿ ರಾಕೇಶ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ” ಯುವತಿಗೆ ಅತಿಯಾದ ರಕ್ತಸ್ರಾವ ಆದಕಾರಣ ಆಕೆ ಮೃತಪಟ್ಟಿದ್ದಾಳೆ. ಆಕೆಯ ಮೇಲೆ ಅತ್ಯಾಚಾರ ಆಗಿದೆಯೋ,ಇಲ್ಲವೋ ಎಂಬುದು ವೈದ್ಯರು ಪರೀಕ್ಷೆಯ ವರದಿ ಬಂದ ಮೇಲೆ ತಿಳಿಸಲಾಗುವುದು” ಎಂದು ಹೇಳಿಕೆ ನೀಡಿದ್ದಾರೆ‌.

https://twitter.com/priyankagandhi/status/1311507851831996416?s=20

https://m.timesofindia.com/city/lucknow/another-dalit-woman-raped-killed-in-up-2-arrested/amp_articleshow/78418057.cms

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version