ದಿನದ ಸುದ್ದಿ
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಲೋಗೋ ತಯಾರಿಸಲು ಅರ್ಜಿ ಆಹ್ವಾನ
ಸುದ್ದಿದಿನ ,ಶಿವಮೊಗ್ಗ :ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಲೋಗೋ ಹಳೆಯದಾಗಿದ್ದು, ಹೊಸ ಲೋಗೋವನ್ನು ರಚಿಸಲು ಸೃಜನಶೀಲ ಕಲಾವಿದರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ತಮ್ಮ ಸ್ವವಿವರಗಳೊಂದಿಗೆ ಲೋಗೋವನ್ನು ಎ4 ಡ್ರಾಯಿಂಗ್ ಪೇಪರ್‍ನಲ್ಲಿ ಬರೆದು ಬಣ್ಣಗಳಲ್ಲಿ ಚಿತ್ರಿಸಿ ಸೀಲ್ ಮಾಡಿದ ಕವರ್‍ನಲ್ಲಿ ಹಾಗೂ ಡಿಜಿಟಲ್ ಮೋಡ್ ಮೂಲಕ ಕಳುಹಿಸುವವರು ಕಾಂಪ್ಯಾಕ್ಟ್ ಡಿಸ್ಕ್ ಮೂಲಕ ದಿ: 16/05/2022 ರೊಳಗಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, 12ನೇ ಮಹಡಿ, ವಿಶ್ವೇಶ್ವರಯ್ಯ ಕೇಂದ್ರ, ಡಾ|| ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು -560001 ಇಲ್ಲಿಗೆ ಸಲ್ಲಿಸುವುದು.
ಸ್ಪರ್ಧೆಯಲ್ಲಿ ಗೆಲ್ಲುವ ಅತ್ಯುತ್ತಮವಾಗಿರುವ ವಿನ್ಯಾಸಕ್ಕೆ ರೂ. 10,000/- ಗಳ ಬಹುಮಾನ ನೀಡಲಾಗುವುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸ್ಪರ್ಧೆಯ ನಿಯಮಗಳು ಮತ್ತು ಷರತ್ತುಗಳಿಗೆ ನಿಗಮದ ವೆಬ್‍ಸೈಟ್ www.kmdc.karnataka.gov.in ರಿಂದ ಡೌನ್‍ಲೋಡ್ ಮಾಡಿಕೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: .08182-228262ನ್ನು ಸಂಪರ್ಕಿಸುವುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243