ದಿನದ ಸುದ್ದಿ

ಪರಿಕರ ವಿತರಣೆಗೆ ಕುರಿ ಮೇಕೆ ಸಾಕಣಿಕೆಗಾರರಿಂದ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮು ನಿಯಮಿತ ಬೆಂಗಳೂರು ವತಿಯಿಂದ 2020-21ನೇ ಸಾಲಿನ ವಲಸೆ ಕುರಿಗಾರರಿಗೆ (ಸಂಚಾರಿ, ಅರೆ ಸಂಚಾರಿ ಕುರಿ, ಮೇಕೆ ಸಾಕಣಿಕೆಗಾರರಿಗೆ ನೈರ್ಸಗಿಕ ವಿಕೋಪಗಳಿಂದ ರಕ್ಷಣೆ ಪಡೆಯಲು ಅವಶ್ಯಕ ಪರಿಕರಗಳನ್ನು.ದಾವಣಗೆರೆ ಜಿಲ್ಲೆಯವಾರು ಪರಿಶಿಷ್ಟ ಜಾತಿಯ 2, ಪರಿಶಿಷ್ಟ ಪಂಗಡದ 1 ಹಾಗೂ ಸಾಮಾನ್ಯ 7 ಒಟ್ಟು 10 ಕಿಟ್‍ಗಳ ಗುರು ನಿಗಧಿಪಡಿಸಲಾಗಿದ್ದು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಸೆ.25 ಕೊನೆಯ ದಿನವಾಗಿದ್ದು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಲ್ಲಿ ನೊಂದಣೆಯಾದ ದಾವಣಗೆರೆ ಜಿಲ್ಲೆಯ ಉತ್ಪಾದಕರ ಸಂಘದ ಸದಸ್ಯರು ಮಾತ್ರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಅರ್ಜಿಗಳನ್ನು ತಮ್ಮ ತಮ್ಮ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಮೂಲಕ ಹಾಗು ಆಯಾ ವ್ಯಾಪ್ತಿಯ ಪಶುವೈದ್ಯಾಧಿಕಾರಿಗಳ ಮುಖಾಂತರ ಎಲ್ಲ ದಾಖಲಾತಿಗಳೊಂದಿಗೆ ಸಂಬಂಧಿಸಿದ ತಾಲ್ಲೂಕು ಮಟ್ಟದ ಸಹಾಯಕ ನಿರ್ದೇಶಕರು, ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಇವರ ಮೂಲಕವೇ ಸಲ್ಲಿಸಬಹುದಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಸಹಾಯಕ ನಿರ್ದೇಶಕರಾದ ಡಾ. ಜಗದೀಶ 9448005250, ಚನ್ನಗಿರಿ ಸಹಾಯಕ ನಿರ್ದೇಶಕರು, ಡಾ.ದೇವೇಂದ್ರಪ್ಪ, 9448571800, ಹರಿಹರ ಸಹಾಯಕ ನಿರ್ದೇಶಕರಾದ ಡಾ. ನಂದಾ ಎಸ್.ಎಲ್. 8073900950, ಹೊನ್ನಾಳಿ ಸಹಾಯಕ ನಿರ್ದೇಶಕರಾದ ಡಾ. ಬಾಬುರತ್ನ, 9448170225, ಜಗಳೂರು ಸಹಾಯಕ ನಿರ್ದೇಶಕರಾದ ಡಾ. ಕೆ.ಬಿ.ಲಿಂಗರಾಜ, 9900964820 , 8088882755 ಸಂಪರ್ಕಿಸಬಹುದೆಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version