ದಿನದ ಸುದ್ದಿ

ಪ್ರಧಾನ ಮಂತ್ರಿ ರಾಷ್ಟ್ರಿಯ ಬಾಲ ಪುರಸ್ಕಾರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : 2023-24ನೇ ಸಾಲಿನ ರಾಷ್ಟ್ರೀಯ ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಗಾಗಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ 18 ವರ್ಷದೊಳಗಿನ ಮಕ್ಕಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ಅಂದರೆ ಧೈರ್ಯ ಮತ್ತು ಸಾಹಸದಿಂದ ಇತರರನ್ನು ರಕ್ಷಿಸಿದ ಹಾಗೂ ಕ್ರೀಡೆ, ಸಮಾಜ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಸಂರಕ್ಷಣೆ, ಕಲೆ, ಸಂಸ್ಕøತಿ ಮತ್ತು ನೂತನ ಆವಿಷ್ಕಾರಗಳನ್ನು ಮಾಡಿ ಉತ್ತಮ ಸಾಧನೆ ಮಾಡಿದ ಮಕ್ಕಳಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಅರ್ಹರು ಆಗಸ್ಟ್ 31 ರ ಸಂಜೆ 5 ಗಂಟೆ ರೊಳಗಾಗಿ ನ್ಯಾಷನಲ್ ಅವಾರ್ಡ್ ಪೋರ್ಟಲ್     ( National Award Portal) ನ https://awards.gov.in ಜಾಲತಾಣದಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version