ದಿನದ ಸುದ್ದಿ

ಹೋಟೆಲ್‍ಗಳಲ್ಲಿ ವಿವಿಧ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಗಳಲ್ಲಿ ವಿವಿಧ ಉದ್ಯೋಗಕ್ಕಾಗಿ ಕನಿಷ್ಠ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಹೊಂದಿದ ಯುವಕ, ಯುವತಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮೇಲ್ವಿಚಾರಕ, ವೇಟರ್, ಮನೆಗೆಲಸ ಮತ್ತು ಅಡುಗೆ ಸಹಾಯಕ ಹುದ್ದೆಗಳಿದ್ದು, ಊಟ ವಸತಿಯೊಂದಿಗೆ ಪಿಎಫ್ ಮತ್ತು ಇಎಸ್‍ಐ ಒಳಗೊಂಡು ತಿಂಗಳಿಗೆ 13.000 ದಿಂದ 15.000 ವೇತನ ನೀಡಲಾಗುತ್ತದೆ. ಜೂನ್ 4 ರೊಳಗಾಗಿ ನೊಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version