ದಿನದ ಸುದ್ದಿ

ಕಲಾವಿದ-ತಂತ್ರಜ್ಞರ ತಾತ್ಕಾಲಿಕ ಹುದ್ದೆಗೆ ಸಂದರ್ಶನ

Published

on

ಸುದ್ದಿದಿನ,ಶಿವಮೊಗ್ಗ : ಶಿವಮೊಗ್ಗ ರಂಗಾಯಣವು ರೆಪರ್ಟರಿಯ ಮೂರು ವರ್ಷಗಳ ಅವಧಿಗೆ ಕಲಾವಿದ/ತಂತ್ರಜ್ಞರ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಸಂದರ್ಶನವನ್ನು ಸೆಪ್ಟಂಬರ್ 18 ರಿಂದ 20 ರವರೆಗೆ ರಂಗಾಯಣ, ಸುವರ್ಣ ಸಾಂಸ್ಕøತಿಕ ಭವನ, ಹೆಲಿಪ್ಯಾಡ್ ಹತ್ತಿರ, ಅಶೋಕನಗರ, ಶಿವಮೊಗ್ಗ ಇಲ್ಲಿ ನಡೆಸಲಾಗುವುದು.

ಈ ಕುರಿತಂತೆ ಅರ್ಜಿದಾರರಿಗೆ ಸಂದರ್ಶನ ಪತ್ರವನ್ನು ಕಳುಹಿಸಲಾಗಿದ್ದು, ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವಂತೆ ರಂಗಾಯಣದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version