ಕ್ರೀಡೆ

ಏಷ್ಯಾ ಕಪ್ ಪುರುಷರ ಹಾಕಿ ಪಂದ್ಯಾವಳಿ ; ಜಪಾನ್ ವಿರುದ್ಧ ಜಯಗಳಿಸಿ ಕಂಚಿನ ಪದಕ ಗೆದ್ದ ಭಾರತ

Published

on

ಸುದ್ದಿದಿನ ಡೆಸ್ಕ್ : ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಪುರುಷರ ಹಾಕಿ ಪಂದ್ಯಾವಳಿಯಲ್ಲಿ ಭಾರತ, ಜಪಾನ್ ವಿರುದ್ಧ 1-0 ಗೋಲುಗಳ ಜಯಗಳಿಸುವ ಮೂಲಕ ಕಂಚಿನ ಪದಕವನ್ನು ಜಯಿಸಿದೆ.

ಪಂದ್ಯದ ಆರಂಭದಲ್ಲೇ ರಾಜಕುಮಾರ್ ಪಾಲ್ ಗೋಲುಗಳಿಸಿದರು. ಮತ್ತು ಆನಂತರ ಎದುರಾಳಿ ತಂಡ ಯಾವುದೇ ಗೋಲು ಹೊಡೆಯದಂತೆ ಸಮರ್ಥವಾಗಿ ನಿಯಂತ್ರಿಸಲಾಯಿತು. ಭಾರತದ ತಂಡದ ನಾಯಕ ಬಿರೇಂದ್ರ ಲಕ್ರಾ ಅತ್ಯುತ್ತಮ ರಕ್ಷಣಾತ್ಮಕ ಆಟಕ್ಕಾಗಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version