ಕ್ರೀಡೆ

ಏಷ್ಯನ್ ಗೇಮ್ಸ್ : ಶೂಟಿಂಗ್ ನಲ್ಲಿ ಮತ್ತೊಂದು ಪದಕ

Published

on

ಸುದ್ದಿದಿನ, ಜಕಾರ್ತ: ಇಲ್ಲಿ ನಡೆಯುತ್ತಿರುವ 18 ನೇ ಏಷ್ಯನ್ ಗೇಮ್ಸ್ ನ 4 ನೇ ದಿನವಾದ ಬುಧವಾರ ಮಹಿಳಾ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ರಹೀ ಜೀವನ್ ಸರ್ನೊಬತ್ ಚಿನ್ನ ಗೆದ್ದಿದ್ದಾರೆ.

ಬುಧವಾರ ನಡೆದ 25 ಮೀ ಪಿಸ್ತೂಲ್ ವಿಭಾಗದ ಫೈನಲ್ ನಲ್ಲಿ ಸರ್ನೊಬತ್, ಥಾಯ್ಲೆಂಡ್ ನ ಶೂಟರ್ ನ್ನು ಹಿಂದಿಕ್ಕಿ ಚಿನ್ನಕ್ಕೆ ಮುತ್ತಿಟ್ಟರು.ಏಷ್ಯನ್ ಗೇಮ್ಸ್ ನಲ್ಲಿ ಸರ್ನೊಬತ್ ಗೆ ಇದು 2 ನೇ ಪದಕ ವಾಗಿದ್ದು ಮೊದಲ ಬಾರಿಗೆ ಚಿನ್ನ ಜಯಿಸಿದ್ದಾರೆ.

ಫೈನಲ್‌ ನಲ್ಲಿ ಮತ್ತೊಬ್ಬ ತಾರಾ ಶೂಟರ್ ಮನು ಭಾಕೇರ್ ಕೂಡ ಅಂತಿಮ 8 ರಲ್ಲಿ ಸ್ಥಾನ ಪಡೆದಿದ್ದರು. ಆದರೆ ಕೊನೆಯ ಸುತ್ತುಗಳಲ್ಲಿ ನೀರಾ ಪ್ರದರ್ಶನ ತೋರಿದ ಭಾಕೇರ್ 6 ನೇ ಸ್ಥಾನದೊಂದಿಗೆ ಎಲಿಮೇನೆಟ್ ಆದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version